ಬೆಂಗಳೂರು[ಜು. 25] ಕಠಿಣ ನಿರ್ಧಾರ ತೆಗೆದುಕೊಂಡಿರುವ ಸ್ಪೀಕರ್ ರಮೇಶ್ ಕುಮಾರ್ ಒಟ್ಟು 3 ಶಾಸಕರನ್ನು ಅನರ್ಹ ಮಾಡಿದ್ದಾರೆ.  ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಪಕ್ಷೇತರ ಆರ್‌. ಶಂಕರ್ ಮೇಲೆ ಅಸ್ತ್ರ ಪ್ರಯೋಗ ಮಾಡಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ಎಲ್ಲ ಶಾಸಕರನ್ನು ಅನರ್ಹತೆ ಮಾಡಬೇಕು ಎಂದು ಸ್ಪೀಕರ್ ಗೆ ಅರ್ಜಿ ಸಲ್ಲಿಸಿದ್ದರು. 

ಬಿಎಸ್‌ವೈ ಮನೆಗೆ ಬಂದಿದ್ದ ಎಚ್‌.ವಿಶ್ವನಾಥ್ ಪುತ್ರ ಎಸ್ಕೇಪ್!?

ಈ ವಿಧಾನಸಭೆ ಅವಧಿ ಮುಗಿಯುವವರೆಗೆ ಅನರ್ಹಗೊಂಡವರು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಇಲ್ಲ. ಜುಲೈ 25 ರಿಂದ ಅನ್ವಯವಾಗುವಂತೆ 2023ರ ಮೇ ವರೆಗೆ ಅನರ್ಹತೆ ಪಟ್ಟಿಯನ್ನು ಕುತ್ತಿಗೆಗೆ ಹಾಕಿಕೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಆದೇಶ ಹೇಳಿದೆ.

ಸ್ಪೀಕರ್ ಆದೇಶ ಹೊರಬರುತ್ತಲೇ ಅನರ್ಹಗೊಂಡವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ತಮಿಳುನಾಡು ಮಾದರಿಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್  ಅಥವಾ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವಂತಿಲ್ಲ. ಆದರೆ ಬೇರೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಇದೆ ಎಂದು ಕಾನೂನು ಪಂಡಿತರು ಹೇಳಿರುವುದು ಅನರ್ಹರಿಗೆ ಶಕ್ತಿ ತಂದಿದೆ.

ಅನರ್ಹತೆ ವಿಚಾರ ಪ್ರಶ್ನೆ ಮಾಡಿ ಅನರ್ಹಗೊಂಡಿರುವವರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರುವುದು ಪಕ್ಕಾ ಆಗಿದೆ. ಒಂದು ಕಡೆ ಸಭೆ ನಡೆಸಿ ಸ್ಪೀಕರ್ ಆದೇಶ ಪ್ರಶ್ನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.