ಬೆಂಗಳೂರು[ಜು. 25]  ಹಿಂಬಾಗಿಲಿನ ಮೂಲಕ ಎಸ್ಕೇಪ್ ಆದ್ರಾ ಎಚ್. ವಿಶ್ವನಾಥ್ ಪುತ್ರ ಎಂಬ ಪ್ರಶ್ನೆ ಮೂಡಿದೆ. ಯಡಿಯೂರಪ್ಪ ಮನೆ ಒಳಹೊಕ್ಕ ನಾಯಕ ನಂತರ ಕಾಣಿಸಿಕೊಂಡಿಲ್ಲ.

ಸರ್ಕಾರ ಪತನ: ಮಾಧ್ಯಮಗಳಿಗೆ ಸೆಲ್ಯೂಟ್ ಹೊಡೆದ ಎಸ್‌.ಎಂ ಕೃಷ್ಣ!

ಬಿಎಸ್ ವೈ ಭೇಟಿಗೆ ಆಗಮಿಸಿದ್ದ ಅಮಿತ್ ಸುಮಾರು 20 ನಿಮಿಷ ಮಾತುಕತೆ ಬಳಿಕ ಹಿಂಬಾಗಿಲಿನ ಮೂಲಕ ತೆರಳಿದ್ದಾರೆ. ಸ್ಪೀಕರ್ ಮುಂದೆ ರೆಬೆಲ್ ಶಾಸಕ ವಿಶ್ವನಾಥ್ ಅನರ್ಹತೆ ವಿಚಾರ ಇದೆ.

ಮಾಧ್ಯಮಗಳ ಮುಂದೆ ಕಾಣಿಸಿಕೊಂಡರೆ ಇದನ್ನೇ ಆಧಾರವಾಗಿ  ಇಟ್ಟುಕೊಂಡು ಕಾಂಗ್ರೆಸ್ ಅಸ್ತ್ರ ಪ್ರಯೋಗ ಮಾಡಬಹುದು ಎಂಬ ಅಳಕು ವಿಶ್ವನಾಥ್ ಪುತ್ರನನ್ನು ಕಾಡಿದೆ ಎಂದು ಹೇಳಲಾಗಿದೆ.  ರಾಮನಗರ ಬಿಜೆಪಿ ಅಧ್ಯಕ್ಷ ರುದ್ರೇಗೌಡ , ಅಮಿತ್ ಅವರನ್ನ ಬಿಎಸ್ ವೈ ಭೇಟಿಗೆ ಕರೆತಂದಿದ್ದರು.