ಅಂದು ಎದೆ ಬಗೆದರೆ ಸಿದ್ದರಾಮಯ್ಯ ಇದ್ದರು..! | ಆದರೆ ಈಗ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೇನೆ| ಈಗ ನನ್ನ ಎದೆಯಲ್ಲಿ ಮತದಾರರು ಮಾತ್ರ ಇದ್ದಾರೆ| ಗುರುವಿನ ವಿರುದ್ಧ ತಿರುಗಿಬಿದ್ದ ಶಿಷ್ಯ ಎಂಟಿಬಿ ನಾಗರಾಜ್
ಅಂದು ಎದೆ ಬಗೆದರೆ ಸಿದ್ದರಾಮಯ್ಯ ಇದ್ದರು..! | ಆದರೆ ಈಗ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೇನೆ| ಈಗ ನನ್ನ ಎದೆಯಲ್ಲಿ ಮತದಾರರು ಮಾತ್ರ ಇದ್ದಾರೆ| ಗುರುವಿನ ವಿರುದ್ಧ ತಿರುಗಿಬಿದ್ದ ಶಿಷ್ಯ ಎಂಟಿಬಿ ನಾಗರಾಜ್
ಬೆಂಗಳೂರು[ಸೆ.13]: ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಗರಾಜ್ ಸಿದ್ದರಾಮಯ್ಯ ವಿಚಾರವಾಗಿ ಸದ್ಯ ಯೂ-ಟರ್ನ್ ಹೊಡೆದಿದ್ದಾರೆ. ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಇರ್ತಾರೆ ಎಂದಿದ್ದ ನಾಗರಾಜ್, ಈಗ ಸಿದ್ದರಾಮಯರನ್ನು ಎತ್ತಿ ಸೈಡ್‌ಗೆ ಇಟ್ಟಿದ್ದೀನಿ ಎಂದಿದ್ದಾರೆ.
ಹೌದು ಹೊಸಕೋಟೆಯ ಅನರ್ಹ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ 'ಎದೆಯಲ್ಲಿದ್ದ ಸಿದ್ದರಾಮಯ್ಯರನ್ನು ಎತ್ತಿ ಸೈಡ್‌ಗಿಟ್ಟಿದ್ದೇನೆ, ಅಲ್ಲಿ ಈಗ ಮತದಾರರು ಮಾತ್ರ ಇದ್ದಾರೆ. ಸದ್ಯ ಬಿಜೆಪಿ ನಾಯಕರ ವಿರುದ್ಧ ಯಾವುದೇ ಅಸಮಾಧಾನ ಇಲ್ಲ' ಎಂದಿದ್ದಾರೆ.
'ನನ್ನ ಎದೆ ಬಗೆದರೆ ಸಿದ್ದು ಕಾಣಿಸ್ತಾರೆ, ಸಿದ್ದು ಆಶೀರ್ವಾದದಿಂದಲೇ ಸಚಿವ ಸ್ಥಾನ'!
ಇದಕ್ಕೇನು ಕಾರಣ ಸಿದ್ದರಾಮಯ್ಯರ ಮೇಲೆ ಅಸಮಾಧಾನಕ್ಕೆ ಕಾರಣವೇನು ಎಂದು ಪ್ರಶ್ನಿಸಿದಾಗ 'ಕೆಲವು ಕಾರಣಾಂತರಗಳಿಂದ ಸಿದ್ದರಾಮಯ್ಯರನ್ನು ಬದಿಗಿರಿಸಿದ್ದೇನೆ' ಎಂದಿದ್ದಾರೆ.
"
ಈ ಹಿಂದೆ ಸಮಾವೇಶವೊಂದರಲ್ಲಿ ಸಿದ್ದರಾಮಯ್ಯ ಪರ ಮಾತನಾಡಿದ್ದ ಶಿಷ್ಯ ಎಂಟಿಬಿ 'ಆಂಜನೇಯನ ಎದೆ ಬಗೆದರೆ ಶ್ರೀರಾಮ ಕಂಡಂತೆ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರ ಜಪ ಕಾಣುತ್ತದೆ' ಎಂದಿದ್ದರು.