ಪ್ರಧಾನಿ ಜೊತೆ ವಿದೇಶ ಪ್ರವಾಸ ಹೋಗುವವರ ಮಾಹಿತಿ ಬಹಿರಂಗಕ್ಕೆ ನಿರ್ದೇಶನ

First Published 29, Jan 2018, 8:34 AM IST
Disclose names of people who travel with Modi on foreign trips
Highlights

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದ ವೇಳೆ ಜೊತೆಯಲ್ಲಿ ತೆರಳುವ ನಿಯೋಗಗಳ ಸದಸ್ಯರ ಹೆಸರನ್ನು ಬಹಿರಂಗಪಡಿಸುವಂತೆ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ. ಮಾಥೂರ್ ಪ್ರಧಾನಿ ಕಚೇರಿಗೆ ನಿರ್ದೇಶಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದ ವೇಳೆ ಜೊತೆಯಲ್ಲಿ ತೆರಳುವ ನಿಯೋಗಗಳ ಸದಸ್ಯರ ಹೆಸರನ್ನು ಬಹಿರಂಗಪಡಿಸುವಂತೆ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ. ಮಾಥೂರ್ ಪ್ರಧಾನಿ ಕಚೇರಿಗೆ ನಿರ್ದೇಶಿಸಿದ್ದಾರೆ.

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಿಯೋಗದ ಸದಸ್ಯರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಕಚೇರಿಯ ಆತಂಕವನ್ನು ಮಾಥೂರ್ ತಳ್ಳಿಹಾಕಿದ್ದಾರೆ.

ಭದ್ರತಾ ಸಿಬ್ಬಂದಿ ಮತ್ತು ಪ್ರಧಾನಿ ಅವರ ಭದ್ರತಾ ವಿವರಗಳನ್ನು ಹೊರತುಪಡಿಸಿ ಉಳಿದ ವಿವರ ಬಹಿರಂಗ ಪಡಿಸಬಹುದಾಗಿದೆ ಎಂದು ಮಾಥೂರ್ ಹೇಳಿದ್ದಾರೆ.

loader