ಆದಿ ಶಂಕರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೆ ಅವರು ಚಲನಚಿತ್ರಗಳಿಗೆ ಟೆಕ್ನಿಷಿಯನ್‌ ಆಗಿ ಕಾರ್ಯ ನಿರ್ವಹಿಸಿದ್ದರು

ಬೆಂಗಳೂರು(ಏ.09): ನಟ ಮತ್ತು ತಂತ್ರಜ್ಞ ಟಿ.ಎಸ್‌. ವಿಜಯರಾಘವ (47) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಖ್ಯಾತ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರ ಸಹೋದರನಾಗಿದ್ದ ವಿಜಯರಾಘವ, ಹಲವು ಚಿತ್ರಗಳಲ್ಲಿ ನಟಿಸಿದ್ದರು. ಬೆಟ್ಟದ ಹೂ, ಆದಿ ಶಂಕರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೆ ಅವರು ಚಲನಚಿತ್ರಗಳಿಗೆ ಟೆಕ್ನಿಷಿಯನ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಅವರು ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ.