ಫೇಸ್'ಬುಕ್ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ನನ್ನನ್ನು ತೇಜೋವಧೆ ಮಾಡಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರಿಗೆ ಸುಮನ್ ತನ್ನ ಸಹೋದರಿ ಮೈತ್ರಿ ಮೂಲಕ ದೂರನ್ನು ದಾಖಲಿಸಿದ್ದಾರೆ.
ಬೆಂಗಳೂರು (ಫೆ.19): ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರೊಬ್ಬರು ತನ್ನನ್ನು ನಿಂದಿಸಿದ್ದಾರೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಸೈಬರ್ ಕ್ರೈಂ ವಿಭಾಗದ ಮೆಟ್ಟೀಲೇರಿದ್ದಾರೆ.
ಆ ದಿನಗಳು, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳಂತ ಸೂಪರ್ ಹಿಟ್ ಚಿತ್ರಗಳನ್ನು ಸ್ಯಾಂಡಲ್'ವುಡ್ಗೆ ಕೊಟ್ಟ ನಿರ್ದೇಶಕಿ ಸುಮನಾ ಕಿತ್ತೂರು, ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮೇಲೆ ಗಂಭಿರ ಆರೋಪ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ತೇಜೋವಧೆ ಮಾಡಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರಿಗೆ ಸುಮನ್ ತನ್ನ ಸಹೋದರಿ ಮೈತ್ರಿ ಮೂಲಕ ದೂರನ್ನು ದಾಖಲಿಸಿದ್ದಾರೆ.
ಈ ಕುರಿತಂತೆ ಇದೀಗ ಪೊಲೀಸರು ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗಣೇಶ್ ಕಾಸರಗೋಡು ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಹಾಕಿದ್ದ ಸ್ಟೇಟಸ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ಜನ ಪ್ರತಿಕ್ರಿಯಿಸಿದ್ದರು. ಜನ ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಸಮಾಜಾಯಿಶಿಯನ್ನು ಗಣೇಶ್ ಕಾಸರಗೋಡು ನೀಡಿದ್ದಾರೆ.
