ಬೆಂಗಳೂರು :  ಬಿಜೆಪಿಯವರು ಸನಾತನ ಧರ್ಮದ ಹೆಸರಿನಲ್ಲಿ ಹಾಗೂ ಬಲಪಂಥೀಯರ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿಸುವ ನಿಜವಾದ ಟೆರರಿಸ್ಟ್‌ಗಳು. ಗೌರಿ ಲಂಕೇಶ್‌, ದಾಭೋಲ್ಕರ್‌ ಹಾಗೂ ಪಾನ್ಸರೆ ಹತ್ಯೆ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗಿದೆ. ಇನ್ನು ಬಿಜೆಪಿಯವರು ಹಾಗೂ ಆರ್‌ಎಸ್‌ಎಸ್‌ ಅವರಿಗೆ ಭಯೋತ್ಪಾದಕರು ಎಂದು ಕರೆಯದೆ ವಿಧಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಾಗೂ ಆರ್‌ಎಸ್‌ಎಸ್‌ನವರು ಬಲಪಂಥೀಯ ಹಾಗೂ ಸನಾತನ ಧರ್ಮದ ಹೆಸರಿನಲ್ಲಿ ಉಗ್ರವಾದ ಮಾಡುವವರು. ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಪ್ರಗತಿಪರರ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗಿದೆ. ರಾಜ್ಯ ಪೊಲೀಸರು ಹಂತಕರು ಯಾರು ಎಂಬುದನ್ನು ಎಳೆ-ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಗೌರಿ ಲಂಕೇಶ್‌, ದಾಭೋಲ್ಕರ್‌, ಪಾನ್ಸರೆ ಹತ್ಯೆ ಹಿಂದೆ ಇರುವವರು ಯಾರು ಎಂಬುದು ಜಗತ್ತಿಗೆ ಗೊತ್ತಾಗಿದೆ. ಬಿಜೆಪಿಯವರು ಈಗ ಏಕೆ ಇದರ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಐಸಿಸ್‌ ಆಗಿದ್ದರೆ ಸುಮ್ಮನಿರುತ್ತಿದ್ದರೇ?:  ಸರಣಿ ಹತ್ಯೆಗಳ ಹಿಂದೆ ಯಾರಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಹೀಗಿದ್ದರೂ ಬಿಜೆಪಿಯವರು ಹಾಗೂ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿಲ್ಲ. ಇದೇ ಹತ್ಯೆಗಳ ಹಿಂದೆ ಐಸಿಸ್‌ನಂತಹ ಸಂಘಟನೆ ಇದ್ದಿದ್ದರೆ ಸುಮ್ಮನಿರುತ್ತಿದ್ದರೇ? ಮಾಧ್ಯಮಗಳು ಇಂಚಿಂಚೂ ವರದಿ ಮಾಡುತ್ತಿದ್ದವು. ಬಿಜೆಪಿಯವರು ಅದನ್ನೇ ಅಸ್ತ್ರವಾಗಿ ಮಾಡಿಕೊಳ್ಳುತ್ತಿದ್ದರು. ಇದೀಗ ಸನಾತನ ಧರ್ಮ ಸಂಘಟನೆಯ ಕೈವಾಡವಿದೆ ಎಂದು ಪೊಲೀಸ್‌ ತನಿಖೆಯಿಂದ ಸ್ಪಷ್ಟವಾಗಿದೆ. ಈಗ ಬಿಜೆಪಿ ಮೌನ ವಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರೇ ನಿಜವಾದ ಉಗ್ರವಾದಿಗಳು ಎಂದು ಆರೋಪಿಸಿದರು.

ಬಿಜೆಪಿಯವರು ಸನಾತನ ಧರ್ಮದ ಹೆಸರಿನಲ್ಲಿ ಹಾಗೂ ಬಲಪಂಥೀಯರ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿಸುವ ನಿಜವಾದ ಟೆರರಿಸ್ಟ್‌ಗಳು. ಗೌರಿ ಲಂಕೇಶ್‌, ದಾಭೋಲ್ಕರ್‌ ಹಾಗೂ ಪಾನ್ಸರೆ ಹತ್ಯೆ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗಿದೆ. ಇನ್ನು ಬಿಜೆಪಿಯವರು ಹಾಗೂ ಆರ್‌ಎಸ್‌ಎಸ್‌ ಅವರಿಗೆ ಭಯೋತ್ಪಾದಕರು ಎಂದು ಕರೆಯದೆ ವಿಧಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.