ಕರಾವಳಿ ಪ್ರವಾಸದ ವೇಳೆ ಅಮಿತ್ ಶಾ ಮಸೀದಿ – ಚರ್ಚ್’ಗೂ ಭೇಟಿ ನೀಡಲಿ : ದಿನೇಶ್ ಗುಂಡೂರಾವ್

First Published 17, Feb 2018, 12:20 PM IST
Dinesh Gundurao Slams Amith Shah And PM Modi
Highlights

ಮೋದಿ ಆಗಮಿಸುವ ಮೈಸೂರು ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡದ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಿಷ್ಟಾಚಾರ ಪಾಲಿಸುವುದು ಕೇಂದ್ರದ ಜವಾಬ್ದಾರಿ. ಆಹ್ವಾನ ನೀಡದಿರುವುದು ಪ್ರಧಾನಿ ಮೋದಿ ಅವರ ಸಣ್ಣತನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಉಡುಪಿ : ಮೋದಿ ಆಗಮಿಸುವ ಮೈಸೂರು ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡದ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಿಷ್ಟಾಚಾರ ಪಾಲಿಸುವುದು ಕೇಂದ್ರದ ಜವಾಬ್ದಾರಿ. ಆಹ್ವಾನ ನೀಡದಿರುವುದು ಪ್ರಧಾನಿ ಮೋದಿ ಅವರ ಸಣ್ಣತನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಇನ್ನು ಅಮಿತ್ ಶಾ ಮೂರ್ನಾಲ್ಕು  ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಆದರೆ ಮತ್ತೆ ರಾಜ್ಯಕ್ಕೆ ಬಂದಾಗಲಾದರೂ ಕೂಡ ಅವರು ಸತ್ಯವನ್ನು ಮಾತನಾಡಲಿ.  ಶಾ ಕೋಮು ಭಾವನೆ ಕೆಡಿಸದಿರಲಿ ಎಂದು ಹೇಳಿದ್ದಾರೆ.

ಅಲ್ಲದೇ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತವೇಡಿ. ನಮ್ಮ ಸರ್ಕಾರದ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಡಲಿ. ಅಮಿತ್ ಶಾ ಅವರು ಜವಾಬ್ದಾರಿಯುತವಾಗಿ ಮಾತನಾಡಲಿ. ಹೆದರಿಸಿ – ಬೆದರಿಸುವ ರಾಜಕಾರಣ ನಮ್ಮ ರಾಜ್ಯಕ್ಕೆ ಬೇಡ  ಎಂದು ಹೇಳಿದ್ದಾರೆ.

ಇನ್ನು  ದೇವಸ್ಥಾನಕ್ಕೆ ಹೋಗಲು ಯಾರ ಅನುಮತಿಯೂ ಕೂಡ ಬೇಕಾಗಿಲ್ಲ.  ದೇವಸ್ಥಾನ, ಮಸೀದಿಯನ್ನು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿಲ್ಲ. ಹಿಂದೆಯೂ ಕಾಂಗ್ರೆಸ್ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡದಿರಲಿ. ಇನ್ನು ಕರಾವಳಿ ಪ್ರವಾಸ ಮಾಡಲಿರುವ ಅಮಿತ್ ಶಾ ಅಲ್ಲಿನ ಮಸೀದಿಗಳಿಗೂ ಕೂಡ ಭೇಟಿ ನೀಡಲಿ ಎಂದಿದ್ದಾರೆ.

loader