ದೇಶದಲ್ಲಿ ‌ಐಟಿ ಇಲಾಖೆ ಅತ್ಯಂತ ಗೌರವಯುತವಾದ ಸಂಸ್ಥೆ.  ಇಂತಹ ಸಂಸ್ಥೆಯನ್ನು ಇದೀಗ ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಐಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಬೆಂಗಳೂರು (ಮಾ. 22): ದೇಶದಲ್ಲಿ ‌ಐಟಿ ಇಲಾಖೆ ಅತ್ಯಂತ ಗೌರವಯುತವಾದ ಸಂಸ್ಥೆ. ಇಂತಹ ಸಂಸ್ಥೆಯನ್ನು ಇದೀಗ ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಐಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಐಟಿ ಇಲಾಖೆಯ ಕೆಲ ಅಧಿಕಾರಿಗಳು‌ ರಾಜ್ಯಕ್ಕೆ ಬಂದಿದ್ದಾರೆ. ಚುನಾವಣೆಯ ದೃಷ್ಟಿಯಿಂದ ‌ಕಾಂಗ್ರೆಸ್ ಶಾಸಕರುಗಳು ಸಚಿವರುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೇಂದ್ರ ಐಟಿ ಅಧಿಕಾರಿಗಳ ಮೂಲಕ ನಮ್ಮ ದಾಳಿ ಮಾಡಿಸುತ್ತಿದೆ. ಇದು ಸರಿಯಲ್ಲ.‌ ಯಾರು ತೆರಿಗೆ ಕಟ್ಟದೆ ವಂಚನೆ ಮಾಡಿದ್ದಾರೋ ಅವರ ವಿರುದ್ದ ಕ್ರಮ ಕೈಗೊಳ್ಳಿ. ಅದು ಬಿಟ್ಟು ಕಾಂಗ್ರೆಸ್ ಶಾಸಕರುಗಳು, ಸಚಿವರುಗಳ ಮೇಲೆ ಉದ್ದೇಶ ಪೂರ್ವಕವಾದ ದಾಳಿ ಸರಿಯಲ್ಲ. ಬಿಜೆಪಿಯವರ ಮೇಲೆ ದಾಳಿ ಮಾಡಿದಾಗ ಅವರ ವಿರುದ್ಧ ಯಾವುದೇ ‌ಕ್ರಮವಿಲ್ಲ. ಹೀಗಾಗಿ ತಪ್ಪು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಿ. ಉದ್ದೇಶ ಪೂರ್ವಕವಾಗಿ ದಾಳಿ ಮಾಡಬೇಡಿ ಎಂದು ಮನವಿ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.