ಬೆಂಗಳೂರು :  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ವಿಚಾರವಾಗಿ ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. 

ಬಿಜೆಪಿ ಮುಖಂಡರು ಪ್ರತ್ಯೇಕ ರಾಜ್ಯದ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ. ಶ್ರೀರಾಮುಲು ಮತ್ತು ಉಮೇಶ್ ಕತ್ತಿ ಈ ವಿಚಾರದ ಬಗ್ಗೆ ಯಾವ ರೀತಿಯ ಮಾತುಗಳನ್ನಾಡಿದ್ದಾರೆ ಎನ್ನುವುದು ತಮಗೆ ತಿಳಿದಿದೆ.  

ಶ್ರೀರಾಮುಲು, ಉಮೇಶ್ ಕತ್ತಿ ಮಾತುಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಇನ್ನು ಬಿಜೆಪಿ ಅವಧಿಯಲ್ಲಿ ಉತ್ತರ ಕರ್ನಾಟಕ ಎಷ್ಟು ಹಿನ್ನಡೆಯಾಗಿದೆ. ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡಲು ಅಡ್ವಾಣಿ ನಿರಾಕರಿಸಿದ್ದರು.  ಆಗ ಅಡ್ವಾಣಿ ನಿಲುವಿಗೆ ಬಿಜೆಪಿ ನಾಯಕರು ಸುಮ್ಮನೇ ಕುಳಿತಿದ್ದರು. ಕಾಂಗ್ರೆಸ್ ಮುಖಂಡರಾದ ಖರ್ಗೆ  ಹಾಗೂ ಧರಂ ಸಿಂಗ್ ಶ್ರಮದಿಂದ ಉತ್ತರ ಕರ್ನಾಟಕ ಕ್ಕೆ ವಿಶೇಷ ಸ್ಥಾನ ಮಾನ ನೀಡಲಾಯಿತು ಎಂದರು.

ಅಲ್ಲದೇ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವ ಶ್ರೀರಾಮುಲು ಕೂಡ ಹೈದ್ರಾಬಾದ್ ಕರ್ನಾಟಕದವರೇ ಅಲ್ಲವೇ ಎಂದು ಪ್ರಶ್ನೆ ಮಾಡಿದರು.