ಭೋಪಾಲ್‌[ಸೆ.11]: ಮೊಹರಂಗೆ ಶುಭಾಶಯ ಕೋರಿ ಟ್ವೀಟ್‌ ಮಾಡಿ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಪೇಚಿಗೆ ಸಿಲುಕಿದ್ದಾರೆ. ಮೊಹರಂರ ಈ ಶುಭ ಸಂದರ್ಭದಲ್ಲಿ ಎಲ್ಲಾ ಮುಸ್ಲಿಂ ಸೋದರ ಸೋದರಿಯರಿಗೆ ನಮ್ಮ ಸೆಲ್ಯೂಟ್‌ ಎಂದು ಸಿಂಗ್‌ ಟ್ವೀಟ್‌ ಮಾಡಿದ್ದರು.

ಅವರು ಬಳಸಿದ ಸೆಲ್ಯೂಟ್‌ ಪದ ಟೀಕೆಗೆ ಗುರಿಯಾಗಿದ್ದು, ಮೊಹರಂ ದುಃಖದ ದಿನವಾಗಿದ್ದು ಅದೂ ನಿಮಗೆ ಗೊತ್ತಿಲ್ಲವೇ ಎಂದು ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ಪ್ರಶ್ನೆ ಮಾಡಿದ್ದಾರೆ.

7ನೇ ಶತಮಾನದ ಕರ್ಬಲಾ ಯುದ್ಧದಲ್ಲಿ ಮಡಿದ ಪೈಗಂಬರರ ಪೌತ್ರ ಹಝ್ರತ್‌ ಇಮಾಂ ಹುಸೈನ್‌ರವರ ನೆನಪಿಗಾಗಿ ಮೊಹರಂ ಆಚರಿಸಲಾಗುತ್ತದೆ.