ಪ್ರಧಾನ ಕಾರ್ಯದರ್ಶಿ ಹುದ್ದೆ ಯಿಂದಲೂ ದಿಗ್ವಿಜಯ್ ಹೊರಕ್ಕೆ

Digvijay Singh removed as Andhra Congress incharge
Highlights

ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ಸಿಂಗ್ ಅವರನ್ನು ಆಂಧ್ರ ಎಐಸಿಸಿ ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಿ ಕೇರಳದ ಮಾಜಿ ಸಿಎಂ ಊಮ್ಮನ್ ಚಾಂಡಿ ಅವರನ್ನು ನೇಮಿಸಲಾಗಿದೆ. 
 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ಸಿಂಗ್ ಅವರನ್ನು ಆಂಧ್ರ ಎಐಸಿಸಿ ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಿ ಕೇರಳದ ಮಾಜಿ ಸಿಎಂ ಊಮ್ಮನ್ ಚಾಂಡಿ ಅವರನ್ನು ನೇಮಿಸಲಾಗಿದೆ. 

ಇದರೊಂದಿಗೆ ಎಐಸಿಸಿಯಲ್ಲಿ ದಿಗ್ವಿಜಯ್ ಹೊಂದಿದ್ದ ಕೊನೆಯ ಹುದ್ದೆಯೂ ಕೈತಪ್ಪಿದೆ. ಸಿಂಗ್‌ರನ್ನು ಈ ಹಿಂದೆ ಗೋವಾ, ಕರ್ನಾಟಕ, ತೆಲಂಗಾಣ ಉಸ್ತುವಾರಿಯಿಂದಲೂ ತೆಗೆಯಲಾಗಿತ್ತು.

2 ವರ್ಷಗಳ ಹಿಂದೆ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆಪ್ತ ವಲಯದಲ್ಲಿದ್ದರು.

loader