ದಿಗಿ-ಧನ್ ವ್ಯಾಪಾರ ಯೋಜನೆಯ ಲಕ್ಕಿ ಡ್ರಾವನ್ನು ಪ್ರತಿ ವಾರ ಘೋಷಣೆ ಮಾಡಲಾಗುತ್ತದೆ.
ನವದೆಹಲಿ(ಡಿ.24): ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ‘ಲಕ್ಕಿ ಗ್ರಾಹಕ್ ಯೋಜನೆ’ಯ ಮೊದಲ ಲಕ್ಕಿ ಡ್ರಾ ಭಾನುವಾರ ನಡೆಯಲಿದೆ. ರಾಷ್ಟ್ರಾದ್ಯಂತ 100 ನಗರಗಳಲ್ಲಿ ‘ಲಕ್ಕಿ ಗ್ರಾಹಕ್ ಯೋಜನೆ’ ಮತ್ತು ‘ದಿಗಿ-ಧನ್ ವ್ಯಾಪಾರ ಯೋಜನೆ’ಯಡಿ ನೀಡಲಾಗುವ ಬಹುಮಾನಗಳನ್ನು ಕ್ರಿಸ್‌ಮಸ್ ದಿನವೇ ಘೋಷಿಸಲು ಸರ್ಕಾರ ಸಿದ್ಧವಾಗಿದೆ.
ಮುಂದಿನ 100 ದಿನಗಳ ಕಾಲ ಪ್ರತಿದಿನ ಲಕ್ಕಿ ಡ್ರಾ ಘೋಷಿಸಲಾಗುತ್ತದೆ. ಆಯ್ಕೆಯಾದವರಿಗೆ ₹10 ಸಾವಿರದಿಂದ ₹15 ಸಾವಿರವರೆಗೂ ಕ್ಯಾಶ್ ಬ್ಯಾಕ್ ಸಿಗಲಿದೆ.
ದಿಗಿ-ಧನ್ ವ್ಯಾಪಾರ ಯೋಜನೆಯ ಲಕ್ಕಿ ಡ್ರಾವನ್ನು ಪ್ರತಿ ವಾರ ಘೋಷಣೆ ಮಾಡಲಾಗುತ್ತದೆ.
