Asianet Suvarna News Asianet Suvarna News

ನಷ್ಟದಲ್ಲಿ ಡಿಜಿಟಲ್ ವ್ಯಾಪಾರಿಗಳು: ಇ-ಕಾಮರ್ಸ್ ಕಂಪನಿಗಳಿಗೆ ರೂ.10ಸಾವಿರ ಕೋಟಿ ನಷ್ಟ

ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಸಂಸ್ಥೆಯ ಅಧ್ಯಯನ ವರದಿ ಪ್ರಕಾರ, ರಿಟೈಲ್,  ಪ್ರಯಾಣ,  ಪೀಠೋಪಕರಣ, ಆಹಾರ ಸಾಮಾಗ್ರಿ ಮಾರಾಟದಲ್ಲಿರುವ 14 ಕಂಪನಿಗಳು  ಸುಮಾರು 10, 670 ಕೋಟಿ ರೂ.ಗಳಷ್ಟು ನಷ್ಟವನ್ನನುಭವಿಸಿವೆ. ಅವುಗಳಲ್ಲಿ ಸುಮಾರು ಶೇ. 70ರಷ್ಟು ಪಾಲು ಅ ಅಮೆಝಾನ್, ಪೇಟಿಎಮ್ ಹಾಗೂ ಫ್ಲಿಪ್’ ಕಾರ್ಟ್ ನಂತಹ ಕಂಪನಿಗಳದ್ದಾಗಿದೆ ಎಂದು ಹೇಳಲಾಗಿದೆ.

Digital India sinking Online sites burn 10K crore in losses

ಒಂದು ಕಡೆ ಸರ್ಕಾರವು ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸುತ್ತಿದೆಯಾದರೆ, ಇನ್ನೊಂದು ಕಡೆ ಇ-ಕಾಮರ್ಸ್ ಕಂಪನಿಗಳು ನಷ್ಟವನ್ನನುಭವಿಸುತ್ತಿದೆಯೆಂದು ನ್ಯೂಸೇಬಲ್ ವರದಿ ಮಾಡಿದೆ.

2016ರಲ್ಲಿ ಇ-ಕಾಮರ್ಸ್ ಕಂಪನಿಗಳ ವ್ಯವಹಾರ ಹೆಚ್ಚಾಗಿದ್ದರೂ, ರಿಯಾಯಿತಿ, ಪ್ರಚಾರ, ಜಾಹೀರಾತು, ಹಾಗೂ ಬಾಡಿಗೆ ಮುಂತಾದವುಗಳಿಗೆ ಭಾರೀ ಖರ್ಚು ಆಗುತ್ತಿರುವುದು  ಕಂಪನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಯೆಂದು ವರದಿ ಹೇಳಿದೆ.

 ಮೋದಿ ಡಿಜಿಟಲ್ ಇಂಡಿಯಾ ಕನಸಿಗೆ ಕೈಜೋಡಿಸಿದ ಬ್ಯಾಂಕ್: ಎಲ್ಲಾ ಮನೆಗಳಿಗೂ 2 ಗಂಟೆ ಉಚಿತ ವೈ-ಫೈ ಸೇವೆ

ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಸಂಸ್ಥೆಯ ಅಧ್ಯಯನ ವರದಿ ಪ್ರಕಾರ, ರಿಟೈಲ್,  ಪ್ರಯಾಣ,  ಪೀಠೋಪಕರಣ, ಆಹಾರ ಸಾಮಾಗ್ರಿ ಮಾರಾಟದಲ್ಲಿರುವ 14 ಕಂಪನಿಗಳು  ಸುಮಾರು 10, 670 ಕೋಟಿ ರೂ.ಗಳಷ್ಟು ನಷ್ಟವನ್ನನುಭವಿಸಿವೆ. ಅವುಗಳಲ್ಲಿ ಸುಮಾರು ಶೇ. 70ರಷ್ಟು ಪಾಲು ಅ ಅಮೆಝಾನ್, ಪೇಟಿಎಮ್ ಹಾಗೂ ಫ್ಲಿಪ್’ ಕಾರ್ಟ್ ನಂತಹ ಕಂಪನಿಗಳದ್ದಾಗಿದೆ ಎಂದು ಹೇಳಲಾಗಿದೆ.

ಜಾಹೀರಾತು ಉದ್ದೇಶಕ್ಕಾಗಿ ಅಮೆಝಾನ್ ರೂ. 2163 ಕೋಟಿ ಹೂಡಿದೆ.  ಮುಂದಿನ ದಿನಗಳಲ್ಲಿ ಅದು $5 ಬಿಲಿಯನ್ ಹೂಡಲಿದೆ ಎಂದು ಹೇಳಲಾಗಿದೆ.

ಪೇಟಿಎಮ್ ಜಾಹೀರಾತಿಗಾಗಿ ರೂ.1115 ಕೋಟಿ ಹೂಡಿದ್ದರೆ, ಫ್ಲಿಪ್’ಕಾರ್ಟ್ ರೂ.923 ಕೋಟಿಗಳನ್ನು ವಿನಿಯೋಗಿಸಿದೆ. ಹಾಗೂ ನಾಲ್ಕುಪಟ್ಟು ನಷ್ಟವನ್ನನುಭವಿಸಿವೆ.

ಸದ್ಯಕ್ಕೆ ಭಾರತದಲ್ಲಿ ಸುಮಾರು 35 ಮಿಲಿಯನ್ ಆನ್’ಲೈನ್ ಗ್ರಾಹಕರಿದ್ದಾರೆ, ಆದರೆ ಇವರೆಲ್ಲರೂ ರಿಯಾಯಿತಿ ಹಾಗೂ ಉಚಿತ-ಉಡುಗೊರೆಯಂತಹ ಆಫರ್’ಗಳಿಂದ ಆಕರ್ಷಿತರಾಗುತ್ತಾರೆ.

Follow Us:
Download App:
  • android
  • ios