ಲಾಲ್‌ ಕೃಷ್ಣ ಅಡ್ವಾಣಿ ಗುಜರಾತ್‌ನ ಬಿಜೆಪಿ ಸಂಸದರಾಗಿದ್ದರೂ ಕೂಡ ಮೋದಿ ಆಗಲಿ ಅಮಿತ್ ಶಾ ಆಗಲಿ ಒಮ್ಮೆಯೂ ಸೌಜನ್ಯಕ್ಕೆ ಕೂಡ ಪ್ರಚಾರಕ್ಕೆ ಬನ್ನಿ ಎಂದು ಕರೆಯಲಿಲ್ಲವಂತೆ.

ನವದೆಹಲಿ (ಡಿ.12): ಲಾಲ್‌ ಕೃಷ್ಣ ಅಡ್ವಾಣಿ ಗುಜರಾತ್‌ನ ಬಿಜೆಪಿ ಸಂಸದರಾಗಿದ್ದರೂ ಕೂಡ ಮೋದಿ ಆಗಲಿ ಅಮಿತ್ ಶಾ ಆಗಲಿ ಒಮ್ಮೆಯೂ ಸೌಜನ್ಯಕ್ಕೆ ಕೂಡ ಪ್ರಚಾರಕ್ಕೆ ಬನ್ನಿ ಎಂದು ಕರೆಯಲಿಲ್ಲವಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ಪ್ರತಿಯಾಗಿ ಅಡ್ವಾಣಿಯವರ ಪರಮಾಪ್ತ ಸುಧೀಂದ್ರ ಕುಲಕರ್ಣಿ ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ ಎಂದು ಲೇಖನ ಬರೆದಿರುವುದು ಮೋದಿ ಕಣ್ಣು ಕೆಂಪಾಗಿಸಿದೆಯಂತೆ. ಗುಜರಾತ್‌ನಲ್ಲಿ ಬಿಜೆಪಿ ಗೆದ್ದರೆ ಅಡ್ವಾಣಿ ಸುಮ್ಮನಿರುತ್ತಾರೋ ಏನೋ. ಆದರೆ ಗುಜರಾತ್‌ನಲ್ಲಿ ಸೋತರೆ ಬಿಜೆಪಿ ನಾಯಕರಿಗೆ ಅಡ್ವಾಣಿ ಅವರನ್ನು ಸುಮ್ಮನೆ ಕೂರಿಸುವುದು ಕಷ್ಟವಾಗಬಹುದು. ರಾಜಕಾರಣದಲ್ಲಿ ಎಲ್ಲ ಗುರು ಶಿಷ್ಯರೂ ಕೊನೆಗೆ ಶತ್ರುಗಳಾಗುವುದು ಒಂದು ಗಂಭೀರ ಅಧ್ಯಯನದ ವಿಷಯ.