ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೆ ಹಾಗೂ ಪ್ರಧಾನಿ ಮೋದಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವ ವಿಚಾರವನ್ನು ಸ್ವತಃ ವಸುಂದರಾ ರಾಜೆ ತಳ್ಳಿ ಹಾಕಿದ್ದು ಇವೆಲ್ಲಾ ಮಾದ್ಯಮದ ಸೃಷ್ಟಿಯಾಗಿದೆ ಎಂದು ರಾಜೆ ಹೇಳಿದ್ದಾರೆ.

ನವದೆಹಲಿ (ಡಿ.06): ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೆ ಹಾಗೂ ಪ್ರಧಾನಿ ಮೋದಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವ ವಿಚಾರವನ್ನು ಸ್ವತಃ ವಸುಂದರಾ ರಾಜೆ ತಳ್ಳಿ ಹಾಕಿದ್ದು ಇವೆಲ್ಲಾ ಮಾದ್ಯಮದ ಸೃಷ್ಟಿಯಾಗಿದೆ ಎಂದು ರಾಜೆ ಹೇಳಿದ್ದಾರೆ.

2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ನನ್ನ ಪುತ್ರ ದುಶ್ಯಂತ ಸಿಂಗ್ ಗೆ ಸ್ಥಾನ ಸಿಗಲಿಲ್ಲ ಎಂದು ನಾನು ಮುನಿಸಿಕೊಂಡಿದ್ದೇನೆ ಎನ್ನುವ ವರದಿ ಕಟ್ಟುಕತೆಯಾಗಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ವಸುಂದರಾ ರಾಜೆ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಒಳ್ಳೆಯ ಬೆಳವಣಿಗೆಗಳಾದಾಗ ಮೋದಿಯವರು ಅದನ್ನು ಅಭಿನಂದಿಸಿ ಟ್ವೀಟ್ ಮಾಡುವುದನ್ನು ನೀವು ನೋಡಿರಬಹುದು. ಒಂದು ವೇಳೆ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬದಲಾಯಿಸಲು ನೀವು ಸಹಾಯ ಮಾಡಿ ಎಂದು ಮಾಧ್ಯಮದವರಿಗೆ ಕುಟುಕಿದ್ದಾರೆ.