ರಾಜ್ಯ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಸಿಎಂ ಸಿದ್ದರಾಮಯ್ಯ ಒಂದು ಬಣವಾಗಿದ್ರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರರದ್ದು ಮತ್ತೊಂದು, ಇಂಧನ ಸಚಿವ ಡಿ ಕೆ ಶಿವಕುಮಾರರದ್ದು ಮಗದೊಂದು. ಹೀಗೆ ಒಡೆದ ಮನೆಯಂತಾಗಿರುವ ಕಾಂಗ್ರೆಸ್ ಹೇಗೆ ಚುನಾವಣೆ ಫೇಸ್ ಮಾಡುತ್ತೆ ಅನ್ನೋ ಯಕ್ಷ ಪ್ರಶ್ನೆ ಕೈ ಕಾರ್ಯಕರ್ತರದ್ದಾಗಿದೆ.

ಬೆಂಗಳೂರು (ಸೆ.20: ರಾಜ್ಯ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಸಿಎಂ ಸಿದ್ದರಾಮಯ್ಯ ಒಂದು ಬಣವಾಗಿದ್ರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರರದ್ದು ಮತ್ತೊಂದು, ಇಂಧನ ಸಚಿವ ಡಿ ಕೆ ಶಿವಕುಮಾರರದ್ದು ಮಗದೊಂದು. ಹೀಗೆ ಒಡೆದ ಮನೆಯಂತಾಗಿರುವ ಕಾಂಗ್ರೆಸ್ ಹೇಗೆ ಚುನಾವಣೆ ಫೇಸ್ ಮಾಡುತ್ತೆ ಅನ್ನೋ ಯಕ್ಷ ಪ್ರಶ್ನೆ ಕೈ ಕಾರ್ಯಕರ್ತರದ್ದಾಗಿದೆ.

ವಿಧಾನಸಭೆ ಚುನಾವಣೆಗೆ ಸ್ವಲ್ಪ ಜಾಸ್ತಿ ಆತ್ಮ ವಿಶ್ವಾಸದಿಂದಲೇ ಕಾಂಗ್ರೆಸ್ ತಯಾರಿ ನಡೆಸಿತ್ತು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ಜನಪರ ಕಾರ್ಯಗಳನ್ನ ಮಾಡಿದ್ದೇವೆ. ಸರ್ಕಾರದ ಸಾಧನೆಗಳನ್ನಿಟ್ಟುಕೊಂಡು, ಎಲ್ಲ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಫೇಸ್ ಮಾಡ್ತೇವೆ ಅಂತಾ ಹೇಳುತ್ತಾ ಬಂದಿದ್ದ ಕಾಂಗ್ರೆಸ್ ಮುಖಂಡರು, ಇದೀಗ ಭಿನ್ನಮತದ ಬೇಗುದಿಯಲ್ಲಿ ಬೇಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಒಡೆದ ಮನೆಯಂತಾಗಿದೆ.

ರಾಜ್ಯ ಕಾಂಗ್ರೆಸ್'ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದೊಂದು ಬಣವಾಗಿದ್ದರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರದ್ದೊಂದು ಬಣವಾಗಿದೆ. ಇದರ ನಡುವೆ ಪವರ್ ಮಿನಿಷ್ಟರ್ ಡಿ ಕೆ ಶಿವಕುಮಾರ್ ಅವರದ್ದೊಂದು ಟೀಮ್. ಹೀಗೆ ಯಾವ ನಾಯಕರಲ್ಲಿಯೂ ಪರಸ್ಪರ ಬಗ್ಗೆ ಒಮ್ಮತಾಭಿಪ್ರಾಯಗಳಿಲ್ಲ. ಬದಲಾಗಿ ಒಬ್ಬರ ವಿರುದ್ಧ ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರೂ ಪಕ್ಷದ ಕಚೇರಿಯಲ್ಲಿ ನಡೆಯುವ ಯಾವುದೇ ಸಭೆಗೆ ತಮ್ಮನ್ನ ಆಹ್ವಾನಿಸುತ್ತಿಲ್ಲ ಅನ್ನೋ ಬೇಸರ ಡಿಕೆ ಶಿವಕುಮಾರದ್ದಾಗಿದೆ. ಅದಕ್ಕಾಗಿಯೇ ಸಹೋದರ ಡಿ ಕೆ ಸುರೇಶ ಮೂಲಕ ಬಂಡಾಯದ ಬಾವುಟವನ್ನ ಡಿಕೆಶಿ ಹಾರಿಸಿದ್ದಾರೆ. ಇದೇ ವೇಳೆ, ಡಿಕೆಶಿಗೆ ಸಭೆಗೆ ಯಾಕೆ ಆಹ್ವಾನಿಸಿಲ್ಲ ಅನ್ನೋದರ ಬಗ್ಗೆ ವಿಚಾರಿಸುತ್ತೇನೆ ಅಂತಾ ಪರಮೇಶ್ವರ್ ಸಮಜಾಯಿಷಿ ನೀಡಿದ್ದಾರೆ.

ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನಡುವೆಯೂ ಸಂಬಂಧ ಹದಗೆಟ್ಟಿದೆ ಎನ್ಬಲಾಗಿದ್ದು, ಸರ್ಕಾರದಲ್ಲಿನ ಯಾವ ನಿರ್ಧಾರಕ್ಕೂ ಸಿದ್ದರಾಮಯ್ಯ, ತಮ್ಮ ಸಲಹೆ ಪಡೆಯುತ್ತಿಲ್ಲ ಹಾಗೂ ತಮ್ಮ ಜೊತೆ ಚರ್ಚೆ ಮಾಡ್ತಿಲ್ಲ ಅನ್ನೋ ಅಸಮಾಧಾನ ಪರಂರದ್ದು, ಇದೇ ವೇಳೆ, ಪರಮೇಶ್ವರ್ ವಿ‌ನಾಕಾರಣ ಮಾಧ್ಯಮಗಳಿಗೆ ಆಹಾರವಾಗ್ತಿದ್ದಾರೆ. ಇದರಿಂದ ಪಕ್ಷದ ಹಾಗೂ ಸರ್ಕಾರದ ಇಮೇಜಗೂ ಧಕ್ಕೆಯಾಗ್ತಿದೆ. ಕೂಡಲೇ ಇದನ್ನು ಸರಿಪಡಿಸುವಂತೆ ಸಿಎಂ ಹೈಕಮಾಂಡ್ ಗೆ ದೂರಿದ್ದಾರೆ.