ಗುಜರಾತ್ ಮತದಾನದ ಬಳಿಕ ಸಮೀಕ್ಷೆಗಳೆಲ್ಲ ಬಿಜೆಪಿ ಗೆಲುವಿನ ಬಗ್ಗೆ ತಿಳಿಸಿದ್ದರೆ, ಬಿಜೆಪಿ ಗೆಲ್ಲುವುದಿಲ್ಲ, ಸಮ್ಮಿಶ್ರ ಸರ್ಕಾರ ರಚಿಸುವುದಕ್ಕೂ ಸಾಧ್ಯವಾಗದಷ್ಟು ಹೀನಾಯ ಫಲಿತಾಂಶ ಬಿಜೆಪಿ ಕಾಣಲಿದೆ ಎಂದು ಕಾಕಡೆ ಭವಿಷ್ಯ ನುಡಿದು ಸುದ್ದಿಯಾಗಿದ್ದರು.

ಮುಂಬೈ(ಡಿ.18): ಗುಜರಾತ್‌'ನಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳಿದ್ದ ಮಹಾರಾಷ್ಟ್ರದ ಬಿಜೆಪಿ ಸಂಸದ ಸಂಜಯ್ ಕಾಕಡೆ, ಚುನಾವಣೆ ಫಲಿತಾಂಶ ಬಂದ ಬಳಿಕ ಯೂಟರ್ನ್ ಹೊಡಿದಿದ್ದಾರೆ.

ತಾವು ನುಡಿದಿದ್ದ ಭವಿಷ್ಯ ಸುಳ್ಳಾದ ಬಗ್ಗೆ ಪ್ರತಿಕ್ರಿಯಿಸಿದ ಕಾಕಡೆ, ತಮ್ಮ ಸಮೀಕ್ಷೆಯಲ್ಲಿ ಮೋದಿಯವರ ವರ್ಚಸ್ಸನ್ನು ಪರಿಗಣಿಸಿರಲಿಲ್ಲ ಎಂದು ತಿಳಿಸಿದ್ದಾರೆ.

‘ಮೋದಿಯವರ ವರ್ಚಸ್ಸನ್ನು ಪರಿಗಣಿಸಲು ನಾವು ಮರೆತಿದ್ದೆವು. ನಾನಾಗಲೀ ಅಥವಾ ನನ್ನ ತಂಡವಾಗಲೀ ಈ ವಿಷಯ ಪರಿಗಣಿಸಿರಲಿಲ್ಲ. ಮೋದಿ ವರ್ಚಸ್ಸು ಫಲ ನೀಡಿತು’ ಎಂದು ಕಾಕಡೆ ಹೇಳಿದ್ದಾರೆ.