ನವದೆಹಲಿ (ಸೆ.10): ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಖಾತೆಗಳು ಹ್ಯಾಕ್ ಆಗುವುದು ಸಾಮಾನ್ಯ. ಅದರಿಂದ ಅನೇಕ ಯಡವಟ್ಟುಗಳಾಗುವುದು ಸಹಜ.
ಖ್ಯಾತ ಉದ್ಯಮಿ ರತನ್ ಟಾಟಾ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ನನ್ನ ಖಾತೆಯಿಂದ ಕಿಡಿಗೇಡಿಗಳು ದುರುದ್ದೇಶಪೂರಿತ ಟ್ವೀಟ್ ಮಾಡಿದ್ದಾರೆ ಎಂದು ಟಾಟಾ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ನನ್ನ ಟ್ವಿಟರ್ ಖಾತೆಯಿಂದ ದುರುದ್ದೇಶಪೂರಿತ ಟ್ವಿಟ್ ಆಗಿರುವುದು ನನಗೆ ಆಫಾತ ತಂದಿದೆ. ಇದು ಕಿಡಿಗೇಡಿಗಳ ಕೆಲಸ. ಇದೀಗ ಟ್ವೀಟನ್ನು ಡಿಲೀಟ್ ಮಾಡಲಾಗಿದೆ. ಆಗಿರುವ ಅನಾನುಕೂಲತೆಗೆ ವಿಷಾದಿಸುತ್ತೇನೆ ಎಂದು ರತನ್ ಟಾಟಾ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕುರಿತು ಟಾಟಾ ವಿವಾದಾತ್ಮಕವಾಗಿ ಟ್ವೀಟ್ ಮಾಡಲಾಗಿತ್ತು.
