‘ಹರೆ ಕೃಷ್ಣ ಎಕ್ಸ್‌ಪೋರ್ಟ್’ ವಜ್ರದ ಕಂಪನಿ ಮಾಲೀಕರಾಗಿರುವ ದೊಲಕಿಯಾ, ಕಂಪನಿಯಲ್ಲಿ ಕಾರ್ಯ ನಿರ್ವಹಿತ್ತಿರುವ ಪೈಕಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ 1716 ನೌಕರರಿಗೆ 400 ಫ್ಲ್ಯಾಟ್‌ಟಗಳು ಮತ್ತು 1260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕಾಗಿ (ದೀಪಾವಳಿ ಬೋನಸ್‌ಗಾಗಿ) 51 ಕೋಟಿ ವೆಚ್ಚ ಮಾಡಿದ್ದಾರೆ. ನೌಕರರಿಗೆ ಉಡುಗೊರೆ ನೀಡುವ ಬಗ್ಗೆ ಮಂಗಳವಾರದ ಅನೌಪಚಾರಿಕ ನೌಕರರ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಕಳೆದ ವರ್ಷದ ದೀಪಾವಳಿ ಪ್ರಯುಕ್ತ ಉತ್ತಮ ಕಾರ್ಯ ನಿರ್ವಹಿಸಿದ ನೌಕರರಿಗೆ 200 ಫ್ಲ್ಯಾಟ್ ಮತ್ತು 491 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.
ಸೂರತ್(ಅ.28): ಇರುವ ಒಬ್ಬನೇ ಪುತ್ರನಿಗೆ ಹಣದ ವೌಲ್ಯ ಅರ್ಥವಾಗಬೇಕು ಎಂಬ ಕಾರಣಕ್ಕೆ ಶ್ರಮದ ಕಾರ್ಯ ನಿರ್ವಹಣೆಗೆ ಬಿಟ್ಟಿರುವ ಗುಜರಾತಿನ ಡೈಮಂಡ್ ವ್ಯಾಪಾರಿ ಸಾವ್ಜಿ ದೊಲಾಕಿಯಾ ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿತ್ತಿರುವ ನೌಕರರಿಗೆ ದೀಪಾವಳಿ ಪ್ರಯುಕ್ತ ಬಂಪರ್ ಉಡುಗೊರೆ ನೀಡಿದ್ದಾರೆ.
‘ಹರೆ ಕೃಷ್ಣ ಎಕ್ಸ್ಪೋರ್ಟ್’ ವಜ್ರದ ಕಂಪನಿ ಮಾಲೀಕರಾಗಿರುವ ದೊಲಕಿಯಾ, ಕಂಪನಿಯಲ್ಲಿ ಕಾರ್ಯ ನಿರ್ವಹಿತ್ತಿರುವ ಪೈಕಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ 1716 ನೌಕರರಿಗೆ 400 ಫ್ಲ್ಯಾಟ್ಟಗಳು ಮತ್ತು 1260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕಾಗಿ (ದೀಪಾವಳಿ ಬೋನಸ್ಗಾಗಿ) 51 ಕೋಟಿ ವೆಚ್ಚ ಮಾಡಿದ್ದಾರೆ. ನೌಕರರಿಗೆ ಉಡುಗೊರೆ ನೀಡುವ ಬಗ್ಗೆ ಮಂಗಳವಾರದ ಅನೌಪಚಾರಿಕ ನೌಕರರ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಕಳೆದ ವರ್ಷದ ದೀಪಾವಳಿ ಪ್ರಯುಕ್ತ ಉತ್ತಮ ಕಾರ್ಯ ನಿರ್ವಹಿಸಿದ ನೌಕರರಿಗೆ 200 ಫ್ಲ್ಯಾಟ್ ಮತ್ತು 491 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.
