ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ.  ಬೃಹತ್ ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಂಡು ಶಶಿಕಲಾ ಬಣದ ಟಿಟಿವಿ ದಿನಕರನ್ ವಿಜಯಿಯಾಗಿದ್ದಾರೆ.

ಚೆನ್ನೈ(ಡಿ.24): ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಬೃಹತ್ ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಂಡು ಶಶಿಕಲಾ ಬಣದ ಟಿಟಿವಿ ದಿನಕರನ್ ವಿಜಯಿಯಾಗಿದ್ದಾರೆ. ಇದರಿಂದ ಜಯಲಲಿತಾ ಸ್ಥಾನಕ್ಕೆ ಇದೀಗ ದಿನಕರನ್ ಆಯ್ಕೆ ನಡೆದಿದೆ.

ಚೆನ್ನೈನ ಆರ್.ಕೆ. ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜಯಲಲಿತಾ 2016ರ ಡಿಸೆಂಬರ್‌ 5ರಂದು ನಿಧನರಾಗಿದ್ದರು. ಜಯಾ ನಿಧನದ ಒಂದು ವರ್ಷದ ಬಳಿಕ ಆರ್.ಕೆ. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಜಯಾ ನಿಧನದ ನಂತರ ಅಣ್ಣಾಡಿಎಂಕೆ ಪಕ್ಷ ಭಾಗವಾಗಿದ್ದು, ಈ ಚುನಾವಣೆ ಸಿಎಂ ಪಳನಿಸ್ವಾಮಿ ಹಾಗೂ ಶಶಿಕಲಾ ಬಣಗಳ ನಡುವೆ ಪೈಪೋಟಿಗೆ ಕಾರಣವಾಗಿತ್ತು.

ಪಳನಿಸ್ವಾಮಿ ಬಣದಿಂದ ಹಿರಿಯ ನಾಯಕ ಎ ಮಧುಸೂದನ್‌, ಶಶಿಕಲಾ ಬಣದಿಂದ ಟಿಟಿವಿ ದಿನಕರನ್‌ ಹಾಗೂ ಡಿಎಂಕೆ ಪಕ್ಷದಿಂದ ಮರುಧು ಗಣೇಶ್‌ ಸ್ಪರ್ಧೆ ಮಾಡಿದ್ದರು.