ರಾಜ್ಯಪಾಲರನ್ನಾಗಿ ನೇಮಿಸುವ ಪ್ರಕ್ರಿ​ಯೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸದ್ಯ​ದಲ್ಲೇ ಪ್ರಕ್ರಿಯೆ ಪೂರ್ಣವಾಗಲಿದೆ. ರಾಜ್ಯ​ಪಾಲರ ನೇಮಕ ವಿಚಾರ ಈಗಾಗಲೇ ವಿಳಂಬವಾಗಿ​ರುವ ಹಿನ್ನೆಲೆಯಲ್ಲಿ ಈಗಾ​ಗಲೇ ಕೇಂದ್ರ ಗೃಹ ಇಲಾಖೆಯಲ್ಲಿ ಕಡತ ವಿಲೇ​ವಾರಿ​ಯಾಗಿದ್ದು, ಅಂತಿಮ ಆದೇಶ ಮಾತ್ರ ಬಾಕಿ ಇದೆ. 

ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರ​ಮೂರ್ತಿ ಅವರನ್ನು ತೆಲಂಗಾಣ ಅಥವಾ ಪಾಂಡಿಚೇರಿ ರಾಜ್ಯಪಾಲರನ್ನಾಗಿ ಮಾಡಲು ಬಿಜೆಪಿ ನಿರ್ಧರಿಸಿದ್ದು, ಸದ್ಯದಲ್ಲೇ ನೇಮಕ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಮೂಲ​ಗಳು ತಿಳಿಸಿವೆ.
ರಾಜ್ಯಪಾಲರನ್ನಾಗಿ ನೇಮಿಸುವ ಪ್ರಕ್ರಿ​ಯೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸದ್ಯ​ದಲ್ಲೇ ಪ್ರಕ್ರಿಯೆ ಪೂರ್ಣವಾಗಲಿದೆ. ರಾಜ್ಯ​ಪಾಲರ ನೇಮಕ ವಿಚಾರ ಈಗಾಗಲೇ ವಿಳಂಬವಾಗಿ​ರುವ ಹಿನ್ನೆಲೆಯಲ್ಲಿ ಈಗಾ​ಗಲೇ ಕೇಂದ್ರ ಗೃಹ ಇಲಾಖೆಯಲ್ಲಿ ಕಡತ ವಿಲೇ​ವಾರಿ​ಯಾಗಿದ್ದು, ಅಂತಿಮ ಆದೇಶ ಮಾತ್ರ ಬಾಕಿ ಇದೆ. 
ಗೃಹ ಸಚಿವ ರಾಜನಾಥ್‌ ಸಿಂಗ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಲಹೆಗೆ ಕಾಯುತ್ತಿದ್ದು, ನಂತರದಲ್ಲಿ ನೇಮಕ ಆದೇಶ ಹೊರ ಬೀಳಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ಸುವರ್ಣ ನ್ಯೂಸ್ ಸೋದರ ಪತ್ರಿಕೆ ಕನ್ನಡ​ಪ್ರಭಗೆ ಪ್ರತಿಕ್ರಿಯಿಸಿ​ರುವ ಶಂಕಮೂರ್ತಿ ಅವರು, ಇತ್ತೀಚಿಗೆ ಪರಿ​ಷತ್‌ ಪ್ರತಿಪಕ್ಷ ನಾಯಕ ಈಶ್ವರಪ್ಪ ಅವ​ರೊಂದಿಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದೆ. ರಾಜ್ಯಪಾಲರ ನೇಮಕ ವಿಚಾರ​ದಲ್ಲಿ ವಿಳಂಬ​ವಾಗುತ್ತಿರುವ ಬಗ್ಗೆ ಪ್ರಸ್ತಾಪವೂ ಆಯಿತು. ತಡವಾಗಿರುವ ಬಗ್ಗೆ ರಾಜನಾಥ್‌ ಸಿಂಗ್‌ ಬೇಸರ ವ್ಯಕ್ತಪಡಿಸಿ​ದರು. ಅಲ್ಲದೆ ಸದ್ಯ​ದಲ್ಲೇ ನೇಮಕ ಮಾಡುವ ಭರವಸೆ ನೀಡಿ ದ್ದಾರೆ ಎಂದರು. ನನ್ನನ್ನು ರಾಜ್ಯಪಾಲರ​ನ್ನಾಗಿ ನೇಮಕ ಮಾಡು​​ವ ವಿಚಾರವಾಗಿ ಸಾಕಷ್ಟುಬಾರಿ ಸುದ್ದಿ​​ಗಳು ಹರಡಿದಾಗ ನನಗೆ ಆಸಕ್ತಿ ಹೆಚ್ಚಾ​ಗುತ್ತಿತ್ತು. ಆದರೆ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿದ ನಂತರ ಸ್ಪಷ್ಟವಾ​ಯಿತು. ಸದ್ಯ​​ದಲ್ಲೇ ರಾಜ್ಯ​ಪಾಲ​ರಾಗಿ ನನ್ನನ್ನು ನೇಮಿ​ಸುವ ಸಾಧ್ಯತೆ ಹೆಚ್ಚಾ​ಗಿದೆ ಎಂದು ಶಂಕರ​ಮೂರ್ತಿ ಹೇಳಿದರು.