ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ ದಕ್ಷಿಣದ ರಾಜ್ಯಗಳಲ್ಲಿ ಪ್ರತಿ‘ಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಇದೀಗ ವಿಮಾನ ಪ್ರಯಾಣಿಕರ ಮೇಲೂ ಹಿಂದಿ ಹೇರಲು ಹೊರಟಿರುವ ವಿಷಯ ಬೆಳಕಿಗೆ ಬಂದಿದೆ.
ನವದೆಹಲಿ(ಜು.27): ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ ದಕ್ಷಿಣದ ರಾಜ್ಯಗಳಲ್ಲಿ ಪ್ರತಿ‘ಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಇದೀಗ ವಿಮಾನ ಪ್ರಯಾಣಿಕರ ಮೇಲೂ ಹಿಂದಿ ಹೇರಲು ಹೊರಟಿರುವ ವಿಷಯ ಬೆಳಕಿಗೆ ಬಂದಿದೆ.
ವಿಮಾನಗಳಲ್ಲಿ ಹಿಂದಿ ಪತ್ರಿಕೆಗಳು ಮತ್ತು ನಿಯತಕಾಲಿಕೆ ಗಳನ್ನು ಒದಗಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶಿಸುವ ಸುತ್ತೋಲೆಯೊಂದನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಇತ್ತೀಚೆಗೆ ಹೊರಡಿಸಿದೆ. ಇದು ಈಗಾಗಲೇ ಕಾವೇರಿರುವ ಹಿಂದಿ ಹೇರಿಕೆ ವಿರೋಧಿ ಹೋರಾಟಕ್ಕೆ ಮತ್ತಷ್ಟು ಕಾವು ನೀಡುವ ಸಾಧ್ಯತೆ ಇದೆ.
‘ವಿಮಾನದಲ್ಲಿ ಹಿಂದಿ ಪತ್ರಿಕೆಗಳನ್ನು ಒದಗಿಸದಿರುವುದು ಭಾರತೀಯ ಸರ್ಕಾರದ ಅಧಿಕೃತ ಭಾಷಾ ನೀತಿಗೆ ವಿರುದ್ಧವಾದುದು’ ಎಂದು ಡಿಜಿಸಿಎ ಜಂಟಿ ಪ್ರಧಾನ ನಿರ್ದೇಶಕ ಲಲಿತ್ ಗುಪ್ತಾ ಜಾರಿಗೊಳಿಸಿರುವ ಸುತ್ತೋಲೆ ಯಲ್ಲಿ ತಿಳಿಸಲಾಗಿದೆ. ಆದರೆ, ಡಿಜಿಸಿಎ ನಿರ್ಧಾರ ಬಗ್ಗೆ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಡಿಜಿಸಿಎ ಈಗ ಭಾರತೀಯ ವಿಮಾನಗಳಲ್ಲಿ ಹಿಂದಿ ಪತ್ರಿಕೆಗಳನ್ನು ನೀಡಲು ಬಯಸಿದೆ (ಸಸ್ಯಾಹಾರಿ ಊಟದೊಂದಿಗೆ)’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕನ್ನಡ, ಇಂಗ್ಲೀಷ್ ಜೊತೆ ಹಿಂದಿ ಭಾಷೆಯಲ್ಲಿ ಹೆಸರು ಮತ್ತು ಮಾಹಿತಿಯನ್ನು ನಮೂದಿಸಿ ರುವುದಕ್ಕೆ ಇತ್ತೀಚೆಗೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆ ಸಂಬಂಧ ಹೋರಾಟ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದಿಂದ, ಹಿಂದಿ ಹೇರಿಕೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
