ನೂರಾರು ಕೋಟಿ ಆಸ್ತಿಗೆ ವಾರಸುದಾರರಾಗಿದ್ದಾರೆನ್ನಲಾಗಿರುವ ದಯಾನಂದ ಸ್ವಾಮಿ ಮಠ ತೊರೆಯಬೇಕೆಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಆದರೆ, ಮಠ ತೊರೆಯಲು ತನಗೆ ಜೀವನಾಂಶ ಬೇಕೆಂದು ದಯಾನಂದ ಸ್ವಾಮಿ ಷರತ್ತು ಮುಂದಿಟ್ಟಿದ್ದಾರೆನ್ನುವ ಸುದ್ದಿಯೂ ಕೇಳಿಬರುತ್ತಿದೆ.

ಬೆಂಗಳೂರು(ಅ. 26): ಚಿತ್ರನಟಿಯೊಂದಿಗಿನ ಪಲ್ಲಂಗದಾಟದ ವಿಡಿಯೋ ಸುವರ್ಣನ್ಯೂಸ್'ನಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಹುಣಸಮಾರನಹಳ್ಳಿ ಮಠದ ಸ್ವಾಮೀಜಿ ದಯಾನಂದ ಕಂಗಾಲಾಗಿದ್ದಾರೆ. ವಿರಕ್ತಿ ಮಠವಾದ ದೇವಣಾಪುರ ದೇವಸಿಂಹಾಸನ ಸಂಸ್ಥಾನ ಮಠದ ಕಾಮಕಾಂಡ ಕಂಡು ಆಘಾತಗೊಂಡ ಮಠದ ಭಕ್ತವೃಂದರು ಮತ್ತು ಗ್ರಾಮಸ್ಥರು ಮಠಕ್ಕೆ ಮುತ್ತಿಗೆ ಹಾಕಿದ್ದಾರೆ. ಜನರು ದಾಳಿ ನಡೆಸುವ ಭೀತಿಯಿಂದ ದಯಾನಂದ ಸ್ವಾಮಿ ಮಠದ ಒಳಗೆ ಅಡಗಿಕೂತಿರುವ ಶಂಕೆ ಇದೆ. ಮಠದಿಂದ ಹೊರಬರುವಂತೆ ಆಗ್ರಹಿಸುತ್ತಿರುವ ಭಕ್ತರು ಮಠದ ಬಾಗಿಲಿಗೆ ಕಲ್ಲು ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೇವಣಾಪುರ ದೇವಸಿಂಹಾಸನ ಸಂಸ್ಥಾನದ ಮಠದಲ್ಲಿ ಗಲಾಟೆ ನಡೆಯುತ್ತಿರುವ ಹಿನ್ನೆಲೆಯಲ್ಲಿ 60ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿರುವ ಭಕ್ತರು ಮಠದ ಹೊರಗೆ ಧರಣಿ ನಡೆಸುತ್ತಿದ್ದಾರೆ.

ಇನ್ನು, ನೂರಾರು ಕೋಟಿ ಆಸ್ತಿಗೆ ವಾರಸುದಾರರಾಗಿದ್ದಾರೆನ್ನಲಾಗಿರುವ ದಯಾನಂದ ಸ್ವಾಮಿ ಮಠ ತೊರೆಯಬೇಕೆಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಆದರೆ, ಮಠ ತೊರೆಯಲು ತನಗೆ ಜೀವನಾಂಶ ಬೇಕೆಂದು ದಯಾನಂದ ಸ್ವಾಮಿ ಷರತ್ತು ಮುಂದಿಟ್ಟಿದ್ದಾರೆನ್ನುವ ಸುದ್ದಿಯೂ ಕೇಳಿಬರುತ್ತಿದೆ.

ಇದೇ ವೇಳೆ, ದಯಾನಂದ ಸ್ವಾಮೀಜಿ ವಿರುದ್ಧ ಹುಣಸಮಾರನಹಳ್ಳಿ ಗ್ರಾಮಸ್ಥರು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಠದಲ್ಲಿ ಅನೈತಿಕ ಚಟುವಟಿಕೆ ನಡೆತ್ತಿದೆ; ಆಸ್ತಿಗಾಗಿ ದಯಾನಂದ ಸ್ವಾಮಿ ದಬ್ಬಾಳಿಕೆ ಮಾಡುತ್ತಿದ್ದಾರೆಂದು ಆರೋಪ ಮಾಡಲಾಗಿದೆ. ಮಠದ ಕೋಟಿ ಕೋಟಿ ಆಸ್ತಿಯನ್ನು ಸ್ವಾಮಿ ನುಂಗಿಹಾಕಿದ್ದಾರೆ; ಮಠದ ಹಣವನ್ನು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.