ಸಚಿವ ರೇವಣ್ಣರಿಂದ ಬಹುಮಾನ ಆಫರ್‌

Development of Hassan district on Revanna's `priority list
Highlights

ಜಿಲ್ಲೆಯ ಗ್ರಾಮ ಪಂಚಾಯ್ತಿಗಳನ್ನು ಅಭಿವೃದ್ಧಿ ದೃಷ್ಟಿಯಿಂದ ನಂ.1 ಮಾಡಿದರೆ ಅಂತಹ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳಿಗೆ . 25 ಸಾವಿರ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಘೋಷಣೆ ಮಾಡಿದ್ದಾರೆ. 

ಹಾಸನ :  ಜಿಲ್ಲೆಯ ಗ್ರಾಮ ಪಂಚಾಯ್ತಿಗಳನ್ನು ಅಭಿವೃದ್ಧಿ ದೃಷ್ಟಿಯಿಂದ ನಂ.1 ಮಾಡಿದರೆ ಅಂತಹ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳಿಗೆ . 25 ಸಾವಿರ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಘೋಷಣೆ ಮಾಡಿದ್ದಾರೆ.

ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಲಸ ಮಾಡದವರ ಮೇಲೆ ಹೇಗೆ ಕಾನೂನು ಕ್ರಮಕೈಗೊಳ್ಳಲಾಗುವುದೋ ಅದೇ ರೀತಿ ಕೆಲಸ ಮಾಡಿ ತಮ್ಮ ಗ್ರಾ.ಪಂ.ಗಳನ್ನು ನಂ.1 ಮಾಡಿದರೆ ಪಿಡಿಒ, ಕಾರ್ಯದರ್ಶಿಗಳನ್ನು ಗೌರವಿಸಿ, ನಗದು ಬಹುಮಾನ ನೀಡಲಾಗುವುದು. ಈ ಬಗ್ಗೆ ನಿರ್ಣಯ ಕೈಗೊಳ್ಳಿ ಎಂದು ಜಿಪಂ ಸಿಇಒಗೆ ಸೂಚಿಸಿದರು.

ನಾನೇ ಬರ್ತೀನಿ ನಡಿ: ಸಾರ್‌. ಅದೊಂದು ವಿಚಿತ್ರ ಗ್ರಾಮ ಪಂಚಾಯ್ತಿ. ಅಲ್ಲಿನ ಸದಸ್ಯರು ಕಾನೂನು ವ್ಯಾಪ್ತಿಗೆ ಬಾರದ ಕೆಲಸವನ್ನೇ ಮಾಡಿಕೊಡಿ ಅಂತಾರೆ. ನನ್ನನ್ನು ಅಲ್ಲಿಂದ ಬಿಡುಗಡೆ ಮಾಡಿಸಿ. ನನ್ಗೆ ಅಲ್ಲಿ ಕೆಲ್ಸ ಮಾಡಕೆ ಆಗಲ್ಲ.  ಹೀಗೆ ಅರಕಲಗೂಡು ತಾಲೂಕಿನ ಗಂಗೂರು ಗ್ರಾಪಂ ಪಿಡಿಒ ಶ್ರೀನಾಥ್‌, ಪರಿಪರಿಯಾಗಿ ತುಂಬಿದ ಸಭೆಯಲ್ಲಿ ಸಚಿವ ರೇವಣ್ಣ ಅವರ ಬಳಿ ಬೇಡಿಕೊಂಡರು.

ಆ ಪಂಚಾಯ್ತಿಗೆ ಯಾರೂ ಹೋಗಲ್ಲ. ಅಂತಹ ಪಂಚಾಯ್ತಿಗೆ ನನ್ನನ್ನು ಹಾಕಿದ್ದಾರೆ. ಸದಸ್ಯೆಯಾಗಿರುವ ಪತ್ನಿ ಕಚೇರಿಗೆ ಬರುವುದಿಲ್ಲ, ಪತಿ ಬರುತ್ತಾರೆ. ಪ್ರತಿಯೊಂದಕ್ಕೆ ಹಸ್ತಕ್ಷೇಪ ಮಾಡುತ್ತಾರೆ. ಅಲ್ಲಿ ಮಾತ್ರ ಕೆಲಸ ಮಾಡಕ್ಕೆ ಆಗಲ್ಲ. ದಯಮಾಡಿ ಅಲ್ಲಿಂದ ಬಿಡುಗಡೆ ಮಾಡಿ ಎಂದು ಬೇಡಿಕೊಂಡರು.

ಈ ವೇಳೆ ಪ್ರತಿಕ್ರಿಯಿಸಿದ ರೇವಣ್ಣ, ಆ ಗ್ರಾಮ ಪಂಚಾಯ್ತಿಗೆ ನಾನೇ ಬಂದು ಭೇಟಿ ಕೊಡ್ತೀನಿ. ಸತ್ಯಸತ್ಯಾತೆ ಪರಿಶೀಲಿಸಿ ನಂತರ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಪೂರ್ಣಗೊಂಡಿದೆ. ಶೀಘ್ರದಲ್ಲೇ ಕೆಲವು ರಾಜ್ಯಗಳಲ್ಲಿ ಗುರುತಿಸಲ್ಪಟ್ಟಆಸ್ಪತ್ರೆಗಳಲ್ಲಿ ಯೋಜನೆ ಕಾರ್ಯಗತಗೊಳಿಸಬಹುದಾದ ನಿರೀಕ್ಷೆಯಿದೆ. ದೇಶದ ಸುಮಾರು 10 ಕೋಟಿ ಬಡ ಕುಟುಂಬಗಳಿಗೆ ತಲಾ 5 ಲಕ್ಷ ರು. ವಿಮಾ ಸೌಲಭ್ಯ ನೀಡುವುದು ಆಯುಷ್ಮಾನ್‌ ಭಾರತ್‌ ಯೋಜನೆಯ ಉದ್ದೇಶವಾಗಿದೆ.

loader