ಲೋಕಸಭೆಗೆ ಹೋಗಲು ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ

First Published 10, Apr 2018, 11:58 AM IST
Devegowda wish to send Prajwal to Lok Sabha
Highlights

ಲೋಕಸಭೆಗೆ ಹೋಗಲು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಒಪ್ಪಿಕೊಂಡಿದ್ದಾರೆ. ತಾತ ಎಚ್.ಡಿ ದೇವೇಗೌಡ ಅವರ ಸಲಹೆಯಂತೆ ಅವರು ಇದೀಗ ತಮ್ಮ ಒಪ್ಪಿಗೆಯನ್ನು ತಿಳಿಸಿದ್ದಾರೆ.

ಬೆಂಗಳೂರು : ಲೋಕಸಭೆಗೆ ಹೋಗಲು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಒಪ್ಪಿಕೊಂಡಿದ್ದಾರೆ. ತಾತ ಎಚ್.ಡಿ ದೇವೇಗೌಡ ಅವರ ಸಲಹೆಯಂತೆ ಅವರು ಇದೀಗ ತಮ್ಮ ಒಪ್ಪಿಗೆಯನ್ನು ತಿಳಿಸಿದ್ದಾರೆ.

 ಇನ್ನು ಆರ್ ಆರ್ ನಗರ ಹೊರತಾಗಿ ಬೇರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಆಫರ್ ಬಂದರೂ ಕೂಡ ಅವರು ನಿರಾಕರಿಸಿದ್ದಾರೆ. ಪ್ರಜ್ವಲ್’ಗೆ ಯಲಹಂಕ ,ಕೆ ಆರ್ ಪೇಟೆ ಕ್ಷೇತ್ರದಲ್ಲಿ ಸ್ವರ್ಧೆಗೆ ಅವಕಾಶ ಬಂದು, ವರಿಷ್ಠರಿಂದ ಅನುಮತಿಯೂ ಸಿಕ್ಕಿದ್ದರೂ ಕೂಡ ಅವರು ಒಪ್ಪಿಕೊಂಡಿಲ್ಲ.  

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಧಿಕಾರದ ಆಸೆಗೆ ನಾನು ಬಿದ್ದಿಲ್ಲ ನಾನು ವಿಧಾನಸಭಾ ಚುನಾವಣೆಗೆ ಈಗ ಸ್ಪರ್ಧಿಸಲ್ಲ. ಪದೇ ಪದೇ ಕ್ಷೇತ್ರ ಬದಲಿಸುವುದಿಲ್ಲ ಎಂದು ಆಪ್ತರಿಗೆ ಹೇಳಿದ್ದಾರೆ.  

ಅಲ್ಲದೇ ನನ್ನ ನಡೆಯಿಂದ ಕುಟುಂಬಕ್ಕೂ ಮತ್ತು ಪಕ್ಷಕ್ಕೂ ಧಕ್ಕೆ ತರುವುದಿಲ್ಲ.  ಹಾಗಾಗೀ ದೇವೇಗೌಡರ ಮಾತಿನಂತೆ ನಾನು ನಡೆಯುವೆ. ಪಕ್ಷ ಸಂಘಟನೆ ಕೆಲಸ ಮುಂದುವರಿಸುವೆ ಎಂದಿದ್ದಾರೆ.

loader