ಧರ್ಮದ ಹೆಸರಿನಲ್ಲಿ ದೇಶ, ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ದೇಶ, ಒಂದು ಕಾನೂನು ಇದು ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ ಸಾಧ್ಯವಿಲ್ಲ ಇದಕ್ಕೆ ಅವಕಾಶ ಕೂಡುವುದಿಲ್ಲ ಅಂತಾ ಮಂಗಳೂರಿನಲ್ಲೇ ಹೇಳಿದ್ದೇನೆ. ರಾಷ್ಟಮಟ್ಟದಲ್ಲೇ ಇದು ಚರ್ಚೆ ನಡೆಯುತ್ತಿದೆ

ಬೆಂಗಳೂರು(ಅ.29): ಕಾಂಗ್ರೆಸ್'ನಲ್ಲಿ ಯು.ಟಿ. ಖಾದರ್ ಯಾವ ಸ್ಥಾನದಲ್ಲಿದ್ದಾರೋ ಅದೇ ಸ್ಥಾನದಲ್ಲಿ ಬಿ.ಎಂ. ಫಾರೂಕ್ ಅವರನ್ನು ನಾನು ಜೀವಂತವಾಗಿರುವಾಗಲೇ ಕಲ್ಪಿಸುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಟಾಂಗ್ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಯಾರಿ ಅಸೋಸಿಯೇಷನ್ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಫಾರೂಕ್ ಸೋತರು ನನ್ನ ಜೊತೆ ಇದ್ದರು. ಆದರೆ ನನ್ನವರೆ ನನಗೆ ಮೋಸ ಮಾಡಿದರು ಎಂದು ಪರೋಕ್ಷವಾಗಿ ಬಂಡಾಯ ಶಾಸಕರ ಬಗ್ಗೆ ಕೋಪ ವ್ಯಕ್ತಪಡಿಸಿದರು.

ಧರ್ಮದ ಹೆಸರಿನಲ್ಲಿ ದೇಶ, ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ದೇಶ, ಒಂದು ಕಾನೂನು ಇದು ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ ಸಾಧ್ಯವಿಲ್ಲ ಇದಕ್ಕೆ ಅವಕಾಶ ಕೂಡುವುದಿಲ್ಲ ಅಂತಾ ಮಂಗಳೂರಿನಲ್ಲೇ ಹೇಳಿದ್ದೇನೆ. ರಾಷ್ಟಮಟ್ಟದಲ್ಲೇ ಇದು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಜೆಡಿಎಸ್ ನ ರಾಜ್ಯಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ಬಿ.ಎಂ. ಫಾರೂಕ್ ಮುಂತಾದವರು ಉಪಸ್ಥಿತರಿದ್ದರು.