ತಮಿಳುನಾಡಿಗೆ ನೀರು ಬಿಡದೇ ಇದ್ದಿದ್ದರೆ ಕರ್ನಾಟಕಕ್ಕೆ ತೊಂದೆರೆಯಾಗುತ್ತಿತ್ತು
ಮಂಡ್ಯ(ಸೆ.11): ತಮಿಳುನಾಡಿಗೆ ನೀರು ಬಿಡಲು ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೆ ನಾನು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಈಗ ನೀರು ಬಿಡದಿದ್ದರೆ ಮುಂದೆ ಕರ್ನಾಟಕಕ್ಕೆ ತೊಂದೆರೆಯಾಗುತ್ತಿತ್ತು, ಅ.18ರ ವಿಚಾರಣೆ ವೇಳೆ ಕರ್ನಾಟಕಕ್ಕೆ ಸಂಕಷ್ಟ ಎದುರಾಗುತ್ತಿತ್ತು ಎಂದು ಕೆಆರ್ಎಸ್ನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಇದಕ್ಕೂ ಮುನ್ನ, ದೇವೇಗೌಡರು, ಕೆಆರ್ಎಸ್ ಜಲಾಶಯದ ವೈಮಾನಿಕ ಸಮೀಕ್ಷೆ ನಡೆಸಿದರು. ಇದೀಗ, ಹಾರಂಗಿ, ಕಬಿನಿ, ಹೇಮಾವತಿ ಡ್ಯಾಂ ವೈಮಾನಿಕ ಸಮೀಕ್ಷೆಗೆ ನಿರ್ಧರಿಸಿದ್ದಾರೆ. ಜಲಾಶಯಗಳ ವಾಸ್ತವ ಸ್ಥಿತಿ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಿರುವ ದೇವೇಗೌಡರು, ಅಧಿಕಾರಿಗಳ ಜೊತೆಯೂ ಚರ್ಚಿಸಲಿದ್ದಾರೆ.
