ಜೆಡಿಎಸ್​ನಲ್ಲೀಗ ಗೌಡರ ಮೊಮ್ಮಕ್ಕಳ ಹವಾ ಶುರುವಾಗಿದೆ. ಇದಕ್ಕೆ ಸ್ವತಃ ದೇವೇಗೌಡರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆ ನಿಖಿಲ್​ ಕುಮಾರ್​ ಪ್ರಚಾರದಲ್ಲಿ ತೊಡಗ್ತಾರೆ ಅನ್ನೋ ಮಾತಿಗೆ ಗೌಡರು ಹೌದು ಎಂದಿದ್ದಾರೆ. ಈ ಮೂಲಕ ದೇವೇಗೌಡರ ಮಾಸ್ಟರ್​ ಪ್ಲಾನ್ ಬಗ್ಗೆ ಭಾರೀ ಚರ್ಚೆಯೂ ಶುರುವಾಗಿದೆ.

ಬೆಂಗಳೂರು (ಅ.13): ಜೆಡಿಎಸ್​ನಲ್ಲೀಗ ಗೌಡರ ಮೊಮ್ಮಕ್ಕಳ ಹವಾ ಶುರುವಾಗಿದೆ. ಇದಕ್ಕೆ ಸ್ವತಃ ದೇವೇಗೌಡರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆ ನಿಖಿಲ್​ ಕುಮಾರ್​ ಪ್ರಚಾರದಲ್ಲಿ ತೊಡಗ್ತಾರೆ ಅನ್ನೋ ಮಾತಿಗೆ ಗೌಡರು ಹೌದು ಎಂದಿದ್ದಾರೆ. ಈ ಮೂಲಕ ದೇವೇಗೌಡರ ಮಾಸ್ಟರ್​ ಪ್ಲಾನ್ ಬಗ್ಗೆ ಭಾರೀ ಚರ್ಚೆಯೂ ಶುರುವಾಗಿದೆ.

ವಿಧಾನಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಭಾರೀ ಸಿದ್ಧತೆ ನಡೆಸಿವೆ. ಜೆಡಿಎಸ್​ ಪಕ್ಷ ಕೂಡಾ ಹಿಂದೆ ಬಿದ್ದಿಲ್ಲ. ಆದ್ರೆ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ ಸ್ವಲ್ಪ ಮಂಕಾಗಿದೆ. ದೇವೇಗೌಡರು ಪಕ್ಷದ ಮುಂಚೂಣಿಯಲ್ಲಿ ನಿಂತಿದ್ದಾರೆ. ಈಗ ಅವರ ಮೊಮ್ಮಕ್ಕಳು ದೇವೇಗೌಡರಿಗೆ ಸಾಥ್​ ನೀಡಲಿದ್ದಾರೆ. ಇದಕ್ಕೆ ಖುದ್ದು ದೇವೇಗೌಡರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆಯಲ್ಲಿ ನಾನು ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ ಅಂತಾ ಸ್ವತಃ ನಿಖಿಲ್ ಕುಮಾರ್​ ಹೇಳಿದ್ದಾರೆ. ಅಪ್ಪನ ಪರವಾಗಿ ಪ್ರಚಾರ ಮಾಡ್ತೀನಿ ನಾನೇಕೆ ಬೇಡವೆನ್ನಲಿ ಎಂದು ದೇವೇಗೌಡ ಹೇಳಿದ್ದಾರೆ.

ರೇವಣ್ಣ ಅವರ ಮಗ ಪ್ರಜ್ವಲ್ ಈಗಾಗಲೇ ರಾಜಕೀಯದಲ್ಲಿ ತೊಡಗಿ ಭಾರೀ ಸದ್ದು ಮಾಡ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕೆಲವರು ಬಕೆಟ್​ಗಳು ನನಗೆ ತೊಂದರೆ ಮಾಡಿದರು ಅಂತಾ ಗುಡುಗಿದರು. ಇದರ ಬೆನ್ನಲ್ಲೇ ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ಸ್ಪರ್ಧಿಸ್ತಾರೆ ಅನ್ನೋ ಮಾತು ಹರಿದಾಡುತ್ತಿದೆ.