ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ದೇವೇಗೌಡರು ಗರಂ ಆಗಿದ್ದಾರೆ.
ಬೆಂಗಳೂರು (ಜ.23): ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ದೇವೇಗೌಡರು ಗರಂ ಆಗಿದ್ದಾರೆ.
ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ. ಒಬ್ಬ ಮಂತ್ರಿಗೋಸ್ಕರವಾಗಿ, ಅವರ ಒತ್ತಡಕ್ಕೆ ಮಣಿದು ಡಿಸಿ ವರ್ಗಾವಣೆ ಮಾಡಲಾಗಿದೆ. ಮೀಟಿಂಗ್'ನಲ್ಲಿ ಸಿಎಂ ಮುಂದೆಯೇ ಮಾತನಾಡಿದ ಹೆಣ್ಣುಮಗಳು ರೋಹಿಣಿ ಎಂದು ಗೌಡ್ರು ಹೇಳಿದ್ದಾರೆ.
ಡಿಸಿ ಬಂದು ಆರು ತಿಂಗಳು ಕೂಡ ಆಗಿಲ್ಲ. ಈ ಹಿಂದಿನ ಡಿಸಿಗೂ ಸರ್ಕಾರ ಹೀಗೆಯೇ ಮಾಡಿದೆ. ಭ್ರಷ್ಟಾಚಾರ ವಿಚಾರದಲ್ಲಿ ಬಹಳ ಕಠಿಣವಾಗಿದ್ದಾರೆ ಡಿಸಿ. ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಆರೋಪಿಸಿದಂತೆ ರೋಹಿಣಿ ಸಿಂಧೂರಿ ಜೆಡಿಎಸ್ ಪರವಾಗಿಲ್ಲ ಎಂದು ಎ.ಮಂಜು ವಿರುದ್ಧ ಗೌಡರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧವೂ ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ.
ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇದು ಆಡಳಿತಾತ್ಮಕ ವರ್ಗಾವಣೆ ಎಂದಿದ್ದಾರೆ.
