Asianet Suvarna News Asianet Suvarna News

ಆ.21ಕ್ಕೆ ಸಂಪುಟ ವಿಸ್ತರಣೆ; ಯಾರಾರಿಗೆ ಸಿಗಲಿದೆ ಸಂಪುಟ ಭಾಗ್ಯ? ಇಲ್ಲಿದೆ ಪಟ್ಟಿ

ಹೆಬ್ಬಾಳ ಶಾಸಕ ಹೆಚ್.ಎಂ.ರೇವಣ್ಣನವರಿಗೆ ಅಬಕಾರಿ ಖಾತೆ ಸಿಗಬಹುದು; ತಿಪಟೂರು ಶಾಸಕ ಕೆ.ಷಡಕ್ಷರಿ ಅವರಿಗೆ ಸಹಕಾರಿ ಖಾತೆ ಸಿಗಬಹುದೆನ್ನಲಾಗಿದೆ. ಅಲ್ಲದೇ, ರಮಾನಾಥ್ ರೈ ಅವರ ಬಳಿ ಇರುವ ಅರಣ್ಯ ಖಾತೆಯನ್ನು ಆರ್.ಬಿ.ತಿಮ್ಮಾಪುರ ಅಥವಾ ನರೇಂದ್ರ ಸ್ವಾಮಿಯವರಿಗೆ ನೀಡುವ ಚಿಂತನೆ ಸಿಎಂ ಸಿದ್ದರಾಮಯ್ಯನವರದ್ದು. ಇನ್ನು ರಮಾನಾಥ್ ರೈ ಅವರಿಗೆ ಗೃಹ ಖಾತೆಯ ಜವಾಬ್ದಾರಿ ಕೊಡುವ ನಿರೀಕ್ಷೆ ಇದೆ.

details of siddaramaiah cabinet expansion

ಬೆಂಗಳೂರು(ಆ. 17): ಸಿದ್ದರಾಮಯ್ಯ ಸರಕಾರದ ಕೊನೆಯ ಸಂಪುಟ ವಿಸ್ತರಣೆ ಇದೇ ಆಗಸ್ಟ್ 21ರಂದು ನಡೆಯುವುದು ಬಹುತೇಕ ಖಚಿತವೆನ್ನಲಾಗಿದೆ. ಸುವರ್ಣನ್ಯೂಸ್'ಗೆ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ ಮೂವರಿಗೆ ಸಂಪುಟ ಭಾಗ್ಯ ಸಿಗಲಿದೆ. ಇಬ್ಬರ ಹೆಸರು ಬಹುತೇಕ ನಿಶ್ಚಿತವಾಗಿದೆ. ಮೂರನೇ ಸಚಿವ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸಲಾಗಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳಿಂದ ಸುವರ್ಣನ್ಯೂಸ್'ಗೆ ಮಾಹಿತಿ ಸಿಕ್ಕಿದೆ.

ಹೆಚ್.ಎಂ.ರೇವಣ್ಣ ಮತ್ತು ಷಡಕ್ಷರಿ ಅವರ ಹೆಸರುಗಳು ಸಂಪುಟ ಸೇರ್ಪಡೆಗೆ ಅಂತಿಮವಾಗಿವೆ. ಇನ್ನೊಂದು ಸ್ಥಾನಕ್ಕೆ ದಲಿತ ಮುಖಂಡರಾದ ನರೇಂದ್ರ ಸ್ವಾಮಿ ಮತ್ತು ಆರ್.ಬಿ.ತಿಮ್ಮಾಪುರ ನಡುವೆ ಸ್ಪರ್ಧೆ ಇದೆ ಎನ್ನಲಾಗಿದೆ. ದಲಿತ ಎಡಗೈ ಸಮುದಾಯದ ಆರ್.ಬಿ. ತಿಮ್ಮಾಪುರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಬೆಂಬಲಗಳು ಬಂದಿವೆ. ಆದರೆ, ಮಳವಳ್ಳಿಯ ಮತ್ತೊಬ್ಬ ದಲಿತ ಶಾಸಕ ನರೇಂದ್ರ ಸ್ವಾಮಿಯವರಿಗೆ ಹೆಚ್ಚು ಅದೃಷ್ಟ ಖುಲಾಯಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸಂಪುಟ ಸೇರ್ಪಡೆಯಾಗಲಿರುವವರು:
1) ಷಡಕ್ಷರಿ
2) ಹೆಚ್.ಎಂ.ರೇವಣ್ಣ
3) ಆರ್.ಬಿ.ತಿಮ್ಮಾಪುರ/ನರೇಂದ್ರ ಸ್ವಾಮಿ

ಇದೇ ವೇಳೆ, ಹೆಬ್ಬಾಳ ಶಾಸಕ ಹೆಚ್.ಎಂ.ರೇವಣ್ಣನವರಿಗೆ ಅಬಕಾರಿ ಖಾತೆ ಸಿಗಬಹುದು; ತಿಪಟೂರು ಶಾಸಕ ಕೆ.ಷಡಕ್ಷರಿ ಅವರಿಗೆ ಸಹಕಾರಿ ಖಾತೆ ಸಿಗಬಹುದೆನ್ನಲಾಗಿದೆ. ಅಲ್ಲದೇ, ರಮಾನಾಥ್ ರೈ ಅವರ ಬಳಿ ಇರುವ ಅರಣ್ಯ ಖಾತೆಯನ್ನು ಆರ್.ಬಿ.ತಿಮ್ಮಾಪುರ ಅಥವಾ ನರೇಂದ್ರ ಸ್ವಾಮಿಯವರಿಗೆ ನೀಡುವ ಚಿಂತನೆ ಸಿಎಂ ಸಿದ್ದರಾಮಯ್ಯನವರದ್ದು. ಇನ್ನು ರಮಾನಾಥ್ ರೈ ಅವರಿಗೆ ಗೃಹ ಖಾತೆಯ ಜವಾಬ್ದಾರಿ ಕೊಡುವ ನಿರೀಕ್ಷೆ ಇದೆ.

ಇಬ್ರಾಹಿಂ ಕಥೆ?
ಸಿದ್ದರಾಮಯ್ಯನವರ ಜೊತೆ ಜೆಡಿಎಸ್'ನಿಂದ ಕಾಂಗ್ರೆಸ್'ಗೆ ಬಂದಿದ್ದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕೂಡ ಸಂಪುಟದ ಭಾಗ್ಯಕ್ಕಾಗಿ ಇಷ್ಟು ದಿನ ವಿಫಲ ಯತ್ನ ಮಾಡುತ್ತಲೇ ಇದ್ದಾರೆ. ಈಗಲೂ ಅವರಿಗೆ ಸಂಪುಟ ಭಾಗ್ಯ ಸಿಗುವ ಸಾಧ್ಯತೆ ಇಲ್ಲ. ಸಿದ್ದರಾಮಯ್ಯನವರು ತಮ್ಮ ಆಪ್ತಮಿತ್ರನನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಬಿಜೆಪಿಯ ವಿಮಲಾ ಗೌಡ ನಿಧನದಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂರನ್ನು ಕೂರಿಸುವ ಸಾಧ್ಯತೆ ಇದೆ. ಇಬ್ರಾಹಿಂ ಜೊತೆ ಸಿದ್ದರಾಮಯ್ಯ ಈ ವಿಚಾರದಲ್ಲಿ ಮಾತನಾಡಿ ಮನವೊಲಿಕೆ ಕೂಡ ಮಾಡಿರುವುದು ತಿಳಿದುಬಂದಿದೆ.

Follow Us:
Download App:
  • android
  • ios