Asianet Suvarna News Asianet Suvarna News

ಕಾಳಧನಿಕರ ಕಳ್ಳಾಟ: ಈವರೆಗೆ ಎಲ್ಲೆಲ್ಲಿ ಕಪ್ಪು ಹಣ ಸಿಕ್ಕಿದೆ ಇಲ್ಲಿದೆ ವಿವರ

ಬ್ಲ್ಯಾಕ್ ಮನಿ ಕುಳಗಳನ್ನು ಮಟ್ಟ ಹಾಕಲು ನೋಟ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂದು ಕೋಟಿ ಕುಳಗಳು ಬ್ಲಾಕ್ ಮನಿ ವೈಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಂತವರಲ್ಲಿ ಕೆಲವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಕಪ್ಪು ಹಣ ದೊರಕಿದೆ ಎಂಬುದನ್ನು ನೋಡುವುದಾದರೆ.

Details Of IT Raids After The Introduction Of Demonetization Throughout India

ನವದೆಹಲಿ(ನ.03): 500, 1000 ನೋಟ್ ಬ್ಯಾನ್ ಮಾಡಿದಾಗಿನಿಂದಲ ಕಾಳಧನಿಕರು ಕಪ್ಪು ಹಣವನ್ನು ವೈಟ್ ಮಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಅಂತಹ ಕಪ್ಪು ಕುಳಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇಡೀ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಎಲ್ಲೆಲ್ಲಿ ಕಪ್ಪು ಹಣ ಸಿಕ್ಕಿದೆ ಎಂಬುದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ  ನೋಡಿ.

ಬ್ಲ್ಯಾಕ್ ಮನಿ ಕುಳಗಳನ್ನು ಮಟ್ಟ ಹಾಕಲು ನೋಟ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂದು ಕೋಟಿ ಕುಳಗಳು ಬ್ಲಾಕ್ ಮನಿ ವೈಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಂತವರಲ್ಲಿ ಕೆಲವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಕಪ್ಪು ಹಣ ದೊರಕಿದೆ ಎಂಬುದನ್ನು ನೋಡುವುದಾದರೆ.

ಕಾಳಧನಿಕರ ಕಳ್ಳಾಟ: ಕರ್ನಾಟಕದಲ್ಲಿ ಎಲ್ಲೆಲ್ಲಿ ಸಿಕ್ಕಿದೆ

-ಸಿಎಂ ಆಪ್ತರಾದ ಚಿಕ್ಕರಾಯಪ್ಪ, ಜಯಚಂದ್ರ ಮನೆ ಮೇಲೆ ದಾಳಿ ನಡೆಸಿದ ಐಟಿ ಇಲಾಖೆ ಹೊಸ 2 ಸಾವಿರ ಮುಖಬೆಲೆಯ 5.7 ಕೋಟಿ ಹಣವನ್ನು ಬೆಂಗಳೂರಲ್ಲಿ ವಶಕ್ಕೆ ಪಡೆದಿದೆ.

-ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ  500, 1000 ಮುಖಬೆಲೆಯ  36.5 ಲಕ್ಷ  ಮೌಲ್ಯದ ಹಳೆ ನೋಟುಗಳನ್ನು ಜಪ್ತಿ ಮಾಡಲಾಗಿದೆ.

-ದಾವಣಗೆರೆ ಜಿಲ್ಲೆಯಲ್ಲೂ 2 ಸಾವಿರ ಮುಖಬೆಲೆಯ 4.91 ಲಕ್ಷ ರೂಪಾಯಿ ಹೊಸಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

-ಇನ್ನೊಂದೆಡೆ ಚಿಕ್ಕಮಗಳೂರಿನಲ್ಲೂ ಹೊಸ 2 ಸಾವಿರ ಮುಖಬೆಲೆಯ 46 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.

-ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ದಾಳಿ ಮಾಡಿರುವ ಅಧಿಕಾರಿಗಳು 2 ಸಾವಿರ ಮುಖಬೆಲೆಯ 71 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

-ಗಣಿನಾಡು ಬಳ್ಳಾರಿಯಲ್ಲೂ 500, 1000 ಮುಖಬೆಲೆಯ 20 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ದೇಶಾದ್ಯಂತ ಕಾಳಧನಿಕರ ಕಳ್ಳಾಟವನ್ನು ನೋಡುವುದಾದರೆ.

-ತೆಲಂಗಾಣ, ಹೈದರಾಬಾದ್'ನಲ್ಲಿ ದಾಳಿ ನಡೆಸಿ ಆದಾಯ ತೆರಿಗೆ ಇಲಾಖೆಗಳು  2 ಸಾವಿರ ಮುಖಬೆಲೆಯ 95. 18 ಲಕ್ಷ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ.

-ಪಂಜಾಬ್' ಮೊಹಾಲಿಯಲ್ಲಿ ಹಳೇ ನೋಟುಗಳಾದ 500, 1000 ಮುಖಬೆಲೆಯ 42 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.

-ಬಿಹಾರದ ಪಾಟ್ನಾದಲ್ಲೂ ಹೊಸ 2 ಸಾವಿರ ಮುಖಬೆಲೆಯ 1.2 ಕೋಟಿ ಹಣವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

-ಅಸ್ಸಾಂನ ಗುವಾಹಟಿಯಲ್ಲಿ 500, 1000  ಮುಖಬೆಲೆಯ 34.5 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ.

-ಗುಜರಾತ್' ಸೂರತ್ ನಲ್ಲೂ ದಾಳಿ ಮಾಡಿರುವ ಐಟಿ ಅಧಿಕಾರಿಗಳು 500, 1000 ಮುಖಬೆಲೆಯ ಭರ್ತಿ 1 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

-ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ದಾಳಿ ನಡೆಸಿ 2000 ಮುಖಬೆಲೆಯ 10 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಹೀಗೆ ದೇಶದೆಲ್ಲೆಡೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ, ಹಾಗೂ ಪೊಲೀಸ್ ಇಲಾಖೆ ಕಾಳಧನಿಕರಿಗೆ ಬಿಸಿ ಮುಟ್ಟಿಸಿ ಕೋಟ್ಯಾಂತರ ಕಪ್ಪು ಹಣವನ್ನು ವಶಪಡಿಸಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios