ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ತೋರುವುದಕ್ಕಿಂತ ಹೆಚ್ಚಿನ ಪ್ರೀತಿ, ಜಯಲಲಿತಾ ತನ್ನ ತಮಿಳುನಾಡಿನ ಜನತೆಗೆ ತೋರಿಸಿದ್ದಾರೆ. ಇಂದು ಅಮ್ಮನನ್ನು ಕಳೆದುಕೊಂಡ ತಮಿಳುನಾಡಿನ ಜನತೆ ಅನಾಥರಾಗಿ ರೋದಿಸುತ್ತಿದ್ದಾರೆ. ತನ್ನ ಜನತೆಗಾಗಿ ಜಯಲಲಿತಾ ಜನಪ್ರಿಯ 'ಅಮ್ಮ' ಯೋಜನೆಗಳನ್ನು ಜಾರಿಗೊಇಳಿಸಿದ್ದರು. ತಮಿಳುನಾಡಿನಾದ್ಯಂತ ಈ ಅಮ್ಮ ಬ್ರ್ಯಾಂಡ್ ಜನ ಪ್ರಖ್ಯಾತಿ ಪಡೆದಿದೆ.

ಚೆನ್ನೈ(ಡಿ.06): ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ತೋರುವುದಕ್ಕಿಂತ ಹೆಚ್ಚಿನ ಪ್ರೀತಿ, ಜಯಲಲಿತಾ ತನ್ನ ತಮಿಳುನಾಡಿನ ಜನತೆಗೆ ತೋರಿಸಿದ್ದಾರೆ. ಇಂದು ಅಮ್ಮನನ್ನು ಕಳೆದುಕೊಂಡ ತಮಿಳುನಾಡಿನ ಜನತೆ ಅನಾಥರಾಗಿ ರೋದಿಸುತ್ತಿದ್ದಾರೆ.

ತನ್ನ ಜನತೆಗಾಗಿ ಜಯಲಲಿತಾ ಜನಪ್ರಿಯ 'ಅಮ್ಮ' ಯೋಜನೆಗಳನ್ನು ಜಾರಿಗೊಇಳಿಸಿದ್ದರು. ತಮಿಳುನಾಡಿನಾದ್ಯಂತ ಈ ಅಮ್ಮ ಬ್ರ್ಯಾಂಡ್ ಜನ ಪ್ರಖ್ಯಾತಿ ಪಡೆದಿದೆ. ಹಾಗಾದರೆ ಈ ಅಮ್ಮ ಬ್ರ್ಯಾಂಡ್'ಗಳಾವುವು? ಇಲ್ಲಿದೆ ವಿವರ

1. ಅಮ್ಮ ಕ್ಯಾಂಟೀನ್: ಕಡಿಮೆ ಖರ್ಚಿನಲ್ಲಿ ಅನ್ನ, ಸಾಂಬಾರು, ಇಡ್ಲಿ, ಮೊಸರನ್ನ ನೀಡುವ ಅಮ್ಮ ಕ್ಯಾಂಟೀನ್‌ಗಳು ಚೆನ್ನೈನಲ್ಲಿ 2014ರಲ್ಲಿ ಆರಂಭವಾದವು.

2. ಅಮ್ಮ ಔಷಧಾಲಯ: ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಔಷಧಗಳನ್ನು ಮಾರುವ ಈ ಅಂಗಡಿಗಳನ್ನು ತಮಿಳುನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ.

3. ಅಮ್ಮ ಮೊಬೈಲ್‌ ಫೋನ್‌: ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ತಮಿಳು ಸಾಫ್ಟ್‌ವೇರ್‌ ಇರುವ ಮೊಬೈಲ್‌ ಫೋನ್‌ ನೀಡುವ ಯೋಜನೆ.

4. ಅಮ್ಮ ಕುಡಿಯುವ ನೀರು: ಇತರ ಕಂಪೆನಿಗಳಿಗಿಂತ ತೀರಾ ಕಡಿಮೆ ಬೆಲೆಗೆ ಬಾಟಲಿಯಲ್ಲಿ ಕುಡಿಯುವ ನೀರು ಮಾರಾಟ ಮಾಡುವ ಯೋಜನೆ ಇದು.

5. ಅಮ್ಮ ಬಿತ್ತನೆ ಬೀಜ: ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪೂರೈಸುವ ಯೋಜನೆ ಈ ವರ್ಷದ ಜನವರಿಯಲ್ಲಿ ಆರಂಭವಾಯಿತು.

6. ಅಮ್ಮ ಸಿಮೆಂಟ್: ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು, ಮನೆ ರಿಪೇರಿ ಮಾಡಿಕೊಳ್ಳಲು ಸಬ್ಸಿಡಿ ದರದಲ್ಲಿ ಸಿಮೆಂಟ್‌ ಪೂರೈಸುವ ಯೋಜನೆ.

7. ಅಮ್ಮ ಆರೋಗ್ಯ ತಪಾಸಣೆ ಯೋಜನೆ: ಬಡವರಿಗೆ ಕಡಿಮೆ ದರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜಾರಿಗೆ ತಂದ ಯೋಜನೆ ಇದು.

8. ಅಮ್ಮ ಲ್ಯಾಪ್‌ಟಾಪ್‌: ಬಡ ವಿದ್ಯಾರ್ಥಿಗಳಿಗೆ 2 ಜಿ.ಬಿ. ರ್‍ಯಾಮ್‌, 120 ಜಿ.ಬಿ. ಹಾರ್ಡ್‌ ಡಿಸ್ಕ್‌ ಇರುವ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ನೀಡುವ ಯೋಜನೆ.

9. ಅಮ್ಮ ಶಿಶು ಆರೈಕೆ ಕಿಟ್: ಬಾಣಂತಿಯರಿಗೆ ಶಿಶು ಪಾಲನೆಗೆ ಅಗತ್ಯವಿರುವ ವಸ್ತುಗಳಿಗೆ ಕಿಟ್‌ ನೀಡುವ ಯೋಜನೆ.

10. ಅಮ್ಮ ಉಪ್ಪು: ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಉಪ್ಪು ಮಾರಾಟ ಮಾಡುವ ಯೋಜನೆ.

11. ಅಮ್ಮ ಕಾಲ್ ಸೆಂಟರ್: ನಗರ ಪ್ರದೇಶದ ಜನ ನೀರಿನ ಸಂಪರ್ಕ ಪಡೆಯಲು, ಆಸ್ತಿ ತೆರಿಗೆ ಪಾವತಿಸಲು ಮತ್ತು ಇತರ ಸೇವೆಗಳನ್ನು ಪಡೆಯಲು ಇರುವ ಏಕಗವಾಕ್ಷಿ ಕೇಂದ್ರ ಇದು.

12. ಅಮ್ಮ ಸಿನಿಮಾ ಮಂದಿರ: ಹವಾನಿಯಂತ್ರಿತ ಹಾಲ್‌ನಲ್ಲಿ ₹ 25 ದರದಲ್ಲಿ ಸಿನಿಮಾ ತೋರಿಸುವ ಅಮ್ಮ ಸಿನಿಮಾ ಮಂದಿರಗಳನ್ನು ಆರಂಭಿಸುವ ಯೋಜನೆ ತಮಿಳುನಾಡು ಸರ್ಕಾರದ್ದು.