ನವದೆಹಲಿ[ಸೆ.16]: ದೆಹಲಿಯಲ್ಲಿನ ಅಧಿಕೃತ ನಿವಾಸ ತೆರವುಗೊಳಿಸುವಂತೆ ಮಾಜಿ ಸಂಸದರಿಗೆ ಕೇಂದ್ರ ನೀಡಲಾಗಿದ್ದ ಸೂಚನೆಯನ್ನು ಧಿಕ್ಕರಿಸಿ ಇನ್ನೂ 82 ಮಾಜಿಗಳು ದೆಹಲಿಯಲ್ಲಿ ತಮ್ಮ ನಿವಾಸದಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಶೀಘ್ರವೇ ಅವರನ್ನು ಮನೆಯಿಂದ ಸರ್ಕಾರ ಎತ್ತಂಗಡಿ ಮಾಡಿಸುವ ಸಾಧ್ಯತೆ ಇದೆ.

ಇನ್ನೊಂದು ವಾರದಲ್ಲಿ ನಿಮಗ ನೀಡಿದ್ದ ಮನೆ ಖಾಲಿ ಮಾಡಬೇಕು. ವಾರದ ಗಡುವು ಮುಗಿದ ಬಳಿಕ ಮನೆಗೆ ನೀಡಲಾಗಿದ್ದ ವಿದ್ಯುತ್‌, ನೀರು, ಅಡುಗೆ ಅನಿಲ ಸಂಪರ್ಕ ಕಡಿತ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಆ.19ರಂದು ಸುಮಾರು 200 ಮಾಜಿ ಸಂಸದರಿಗೆ ನೋಟಿಸ್‌ ಜಾರಿ ಮಾಡಿತ್ತು.

ದಿಲ್ಲಿ ಸರ್ಕಾರಿ ಬಂಗ್ಲೆ ಬಿಡದ 200 ಮಾಜಿ ಸಂಸದರು!

ಬಳಿಕ 118 ಸದಸ್ಯರು ಮನೆ ಖಾಲಿ ಮಾಡಿದ್ದಾರೆ. ಆದರೆ ಇನ್ನೂ 82 ಮಾಜಿಗಳು ಇನ್ನು ಮನೆ ಬಿಟ್ಟು ಹೋಗುವ ಸುಳಿವು ನೀಡಿಲ್ಲ. ಹೀಗಾಗಿ ಅವರನ್ನು ಸರ್ಕಾರ ಬಲವಂತವಾಗಿ ಎತ್ತಂಗಡಿ ಮಾಡಿಸುವ ಸಾಧ್ಯತೆ ಇದೆ.