ನವದೆಹಲಿ(ನ.25): ವಿದೇಶದಲ್ಲಿರುವ ಭಾರತೀಯ ಕಪ್ಪು ಹಣದ ಪ್ರಮಾಣದ ಬಗ್ಗೆ  ಮಾಹಿತಿ ನೀಡಲು ಪ್ರಧಾನಮಂತ್ರಿ ಕಾರ್ಯಾಲಯ ನಿರಾಕರಿಸಿದೆ.

15 ದಿನಗಳಲ್ಲಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಅಕ್ಟೋಬರ್ 16 ರಂದು ಆದೇಶ ನೀಡಿದ್ದರೂ, ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ.

ಕಪ್ಪು ಹಣ ಸಂಬಂಧ ಸಂಜಯ್ ಚತುರ್ವೇದಿ ಎಂಬವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಕಾರ್ಯಾಲಯ, ವಿಶೇಷ ತನಿಖಾ ತಂಡವನ್ನು ಈಗಾಗಲೇ ರಚಿಸಲಾಗಿದ್ದು ಅದು ತನಿಖೆಯನ್ನು ಮುಂದುವರೆಸಿದೆ ಎಂದಷ್ಟೇ ಹೇಳಿಕೆ ನೀಡಿದೆ.

ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಎಲ್ಲಾ  ಪ್ರಯತ್ನಗಳ ಬಹಿರಂಗಪಡಿಸುವಿಕೆಯು ತನಿಖೆಯ ಸಂಪೂರ್ಣ ಪ್ರಕ್ರಿಯೆಯನ್ನು ತಡೆಯುತ್ತದೆ  ಹೀಗಾಗಿ ಆರ್‌ಟಿಐ ಕಾಯ್ದೆ ಸೆಕ್ಷನ್ 8 (1) (ಹೆಚ್) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಪ್ರಧಾನಮಂತ್ರಿ ಕಾರ್ಯಾಲಯ ಪ್ರತಿಕ್ರಿಯಿಯೆ ನೀಡಿದೆ.