ಎಪ್ಪತ್ತರ ಹರೆಯದ ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಇಪ್ಪತ್ತರ ಯುವಕರಂತೆ ಶನಿವಾರ ಮುರ್ಡೇಶ್ವರ ಬಳಿಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಸುವ ಮೂಲಕ ಅಚ್ಚರಿ ಮೂಡಿಸಿದರು.

ಕಾರವಾರ (ಜ.07): ಎಪ್ಪತ್ತರ ಹರೆಯದ ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಇಪ್ಪತ್ತರ ಯುವಕರಂತೆ ಶನಿವಾರ ಮುರ್ಡೇಶ್ವರ ಬಳಿಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಸುವ ಮೂಲಕ ಅಚ್ಚರಿ ಮೂಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು 20 ಕೆ.ಜಿ. ಭಾರದ ಆಮ್ಲಜನಕದ ಸಿಲಿಂಡರ್, ಉಸಿರಾಟದ ಉಪಕರಣ, ಫೇಸ್‌ಮಾಸ್ಕ್, ರೆಗ್ಯುಲೇಟರ್, ಪ್ರೆಶರ್ ಗೇಜ್, ಸ್ಕೂಬಾ ಸೂಟ್‌ಗಳನ್ನು ಧರಿಸಿದ ದೇಶಪಾಂಡೆ ನೇತ್ರಾಣಿ ದ್ವೀಪದ ಬಳಿ ಕಡಲಲ್ಲಿ ಮುಳುಗಿ ಸಾಗರ ತಳದ ಜೀವ ವೈವಿಧ್ಯವನ್ನು ನೋಡಿ ಅಚ್ಚರಿಪಟ್ಟರು. ನಂತರ ಮಾತನಾಡಿದ ಅವರು ‘ಸ್ಕೂಬಾ ಡೈವಿಂಗ್ ಅವಿಸ್ಮರಣೀಯ ಕ್ಷಣ’ ಎಂದು ಪ್ರತಿಕ್ರಿಯಿಸಿದರು.

 ನೇತ್ರಾಣಿಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಸ್ಕೂಬಾ ಡೈವಿಂಗ್ ಉತ್ಸವವನ್ನು ದೇಶಪಾಂಡೆ ಉದ್ಘಾಟಿಸಿದರು. ತರುವಾಯ 12 ನಾಟಿಕಲ್ ಮೈಲು ದೂರದ ನೇತ್ರಾಣಿಗೆ ಬೋಟ್‌ನಲ್ಲಿ ತೆರಳಿ ಸ್ವತಃ ಸ್ಕೂಬಾ ಡೈವ್ ಹೊಡೆದರು. ಸುಮಾರು ೫ ನಿಮಿಷ ಕಾಲ ದೇಶಪಾಂಡೆ ಸಮುದ್ರದ ಆಳದಲ್ಲಿ ಕಳೆದರು.