300 ವರ್ಷಗಳ ಹಿಂದೆ ಮುಳುಗಿದ ಹಡಗಲ್ಲಿ ಪತ್ತೆಯಾದ ಸಂಪತ್ತು..?

news | Thursday, May 24th, 2018
Suvarna Web Desk
Highlights

ಸಾಗರದಾಳದಲ್ಲಿ ಅದೆಷ್ಟೋ ಹಡಗುಗಳು ಮುಳುಗಿ ಹೋಗಿವೆ. ಆದರೆ ಕೆಲವು ಹಡಗುಗಳು ಮುಳುಗಿದ ಅದೆಷ್ಟೋ ಶತಮಾನಗಳ ಬಳಿಕವೂ ಜಗತ್ತನ್ನು ಕಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ ಆ ಹಡಗಿನ ಜನಪ್ರೀಯತೆ ಒಂದೆಡೆಯಾದರೆ ಅದರ ಜೊತೆ ಮುಳುಗಿದ ಅಪಾರ ಸಂಪತ್ತು ಕೂಡ ಜನರ ಗಮನ ಸೆಳೆಯುತ್ತಲೇ ಇರುತ್ತದೆ.

ಬೆಂಗಳೂರು (ಮೇ. 24): ಸಾಗರದಾಳದಲ್ಲಿ ಅದೆಷ್ಟೋ ಹಡಗುಗಳು ಮುಳುಗಿ ಹೋಗಿವೆ. ಆದರೆ ಕೆಲವು ಹಡಗುಗಳು ಮುಳುಗಿದ ಅದೆಷ್ಟೋ ಶತಮಾನಗಳ ಬಳಿಕವೂ ಜಗತ್ತನ್ನು ಕಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ ಆ ಹಡಗಿನ ಜನಪ್ರಿಯತೆ ಒಂದೆಡೆಯಾದರೆ ಅದರ ಜೊತೆ ಮುಳುಗಿದ ಅಪಾರ ಸಂಪತ್ತು ಕೂಡ ಜನರ ಗಮನ ಸೆಳೆಯುತ್ತಲೇ ಇರುತ್ತದೆ.

ಇದೀಗ ಆ ರೀತಿಯ ಹಡಗೊಂದು ಸುದ್ದಿಯಲ್ಲಿದೆ. ಸುಮಾರು ಮೂರು ಶತಮಾನಗಳ ಹಿಂದೆ ಅಟ್ಲಾಂಟಿಕ್ ಸಾಗರದಾಳದಲ್ಲಿ ಬ್ರಿಟಿಷ್ ನೌಕಾಸೇನೆ ಹೊಡೆದುರುಳಿಸಿದ್ದ ಸ್ಪೇನ್ ಹಡಗೊಂದನ್ನು ಪತ್ತೆ ಮಾಡಲಾಗಿದೆ. ಸ್ಪೇನ್ ನ ’ದಿ ಸಾನ್ ಜೋಸ್ ಎಂಬ ಹಡಗನ್ನು ಜೂನ್ 8, 1708 ರಲ್ಲಿ ಬ್ರಿಟಿಷ್ ಪಡೆಗಳು ಹೊಡೆದುರುಳಿಸಿದ್ದವು. ಇದು ಜಲಯುದ್ದದ ಇತಿಹಾಸದಲ್ಲೇ ಅತ್ಯಂತ ದುಬಾರಿ ದುರಂತ ಎಂದು ಪರಿಗಣಿಸಲ್ಪಟ್ಟಿತ್ತು. 

ಸದ್ಯ ಈ ಹಡಗನ್ನು ಆಧುನಿಕ ರೊಬೋಟ್ ಸಬ್ ಮರೀನ್ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ರೆಮುಸ್ 6000 ಎಂಬ ಪುಟಾಣಿ ಯಂತ್ರ ಸಾನ್ ಜೋಸ್ ಹಡಗನ್ನು ಪತ್ತೆ ಮಾಡಿದೆ. ಮುಳುಗಿದ್ದ ಹಡಗಿನಲ್ಲಿ ಸುಮಾರು 17 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಚಿನ್ನದ ಸಂಪತ್ತು ಇದೆ ಎನ್ನಲಾಗಿದೆ. ರೆಮುಸ್ 6000 ಈ ಮೊದಲು ಬ್ರೇಝಿಲ್ ಸಾಗರಾದಾಳದಲ್ಲಿ ಮುಳುಗಿದ್ದ ಏರ್ ಫ್ರಾನ್ಸ್ 447 ವಿಮಾನ ಪತ್ತೆ ಹಚ್ಚಿ ಸುದ್ದಿ ಮಾಡಿತ್ತು.

Comments 0
Add Comment

  Related Posts

  Gold Smuggling at Kempegowda Airport

  video | Sunday, March 25th, 2018

  Gold Smuggling at Kempegowda Airport

  video | Sunday, March 25th, 2018
  Shrilakshmi Shri