Asianet Suvarna News Asianet Suvarna News

ಗಲಭೆಯಿಂದ ಆಸ್ತಿ ನಾಶ: ಬಾಬಾ'ನ ಆಸ್ತಿ ಮುಟ್ಟುಗೋಲು

ಈಗಾಗಲೇ ಪಂಜಾಬ್ ರಾಜ್ಯದಾದ್ಯಂತ ಬಿಗಿ ಭದ್ರತೆ ವಹಿಸಲಾಗಿದ್ದು, ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ. ನಮ್ಮ ರಾಜ್ಯದ ಭದ್ರತಾ ಪಡೆಗಳು ಸೂಕ್ತ ಮುನ್ನಚ್ಚರಿಕೆ ವಹಿಸಿರುವುದಕ್ಕೆ ನಾನೂ ಆಭಾರಿಯಾಗಿದ್ದಾನೆ. ಪರಿಸ್ಥಿತಿ ಮಿತಿಮೀರಲು ನನ್ನ ರಾಜ್ಯದಲ್ಲಿ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

Dera will pay for damages

ನವದೆಹಲಿ(ಆ.26): ವಿವಾದಾತ್ಮಕ ಗುರು ಬಾಬಾ ರಹೀಂ ಸಿಂಗ್ ಬೆಂಗಲಿಗರಿಂದ ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಆಗಿರುವ ನಷ್ಟಕ್ಕೆ ಬಾಬಾ ಒಡೆತನದ ಡೇರಾ ಸಚ್ಚಾ ಸೌಧ ಸಂಸ್ಥೆಗೆ ಸೇರಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎರಡೂ ಸರ್ಕಾರಗಳು ನಿರ್ಧರಿಸಿವೆ.

ಈ ಬಗ್ಗೆ ಪಂಜಾಬ್'ನ ಉನ್ನತಮಟ್ಟದ ಸಭೆಯಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ' ಗಲಭೆಯಿಂದ ಪಂಜಾಬ್'ನಲ್ಲಿ ಆಗಿರುವ ನಷ್ಟವನ್ನು ಬಾಬಾ ಒಡೆತನದ ಡೇರಾ ಸಂಸ್ಥೆ ತುಂಬಿಕೊಡಲಿದೆ. ಈಗಾಗಲೇ ಪಂಜಾಬ್ ರಾಜ್ಯದಾದ್ಯಂತ ಬಿಗಿ ಭದ್ರತೆ ವಹಿಸಲಾಗಿದ್ದು, ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ. ನಮ್ಮ ರಾಜ್ಯದ ಭದ್ರತಾ ಪಡೆಗಳು ಸೂಕ್ತ ಮುನ್ನಚ್ಚರಿಕೆ ವಹಿಸಿರುವುದಕ್ಕೆ ನಾನೂ ಆಭಾರಿಯಾಗಿದ್ದಾನೆ. ಪರಿಸ್ಥಿತಿ ಮಿತಿಮೀರಲು ನನ್ನ ರಾಜ್ಯದಲ್ಲಿ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ ಗುರುಮೀತ್ ರಾಮ್ ರಹೀಂ ಸಿಂಗ್'ನನ್ನು ಪಂಚ್'ಕುಲಾ ಜಿಲ್ಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ವಶಕ್ಕೆ ಪಡೆಯಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಐಬಿ ಹಾಗೂ ವಿವಿಧ ಸೇನಾ ಮುಖ್ಯಸ್ಥರೊಂದಿಗೆ  ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದು, ಪರಿಸ್ಥಿತಿ ಎರಡೂ ರಾಜ್ಯಗಳಲ್ಲಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios