ಕೋರ್ಟ್ ಬಾಬಾ ರಾಮ್ ರಹಿಮ್ ಸಿಂಗ್ ದೋಷಿ ಎಂದು ಅತ್ತ ತೀರ್ಪು ನೀಡುತ್ತಲೇ ಇತ್ತ ಬಾಬಾ ಬೆಂಬಲಿಗರ ಗೂಡಾಗಿರಿ ಶುರುವಾಗಿದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಹರಿಯಾಣದ ಎಲ್'ಐಸಿ ಕಚೇರಿಗೆ ಬೆಂಕಿ ಇಟ್ಟರೆ ಐಟಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈ ಗೂಂಡಾಗಿರಿಯಿಂದ ಹರಿಯಾಣ, ಪಂಜಾಬ್, ದೆಹಲಿ ಅಕ್ಷರಶಃ ನಲುಗಿ ಹೋಗಿದೆ. ಇದನ್ನು ಕಂಡ ಸರ್ಕಾರ ಇದೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದಂತೆ ಡಿಸಿಪಿಯನ್ನು ವಜಾಗೊಳಿಸಿ ತನ್ನ ಕೈ ತೊಳೆದುಕೊಂಡಿದೆ.
ಚಂಡೀಗಢ (ಆ.26): ಕೋರ್ಟ್ ಬಾಬಾ ರಾಮ್ ರಹಿಮ್ ಸಿಂಗ್ ದೋಷಿ ಎಂದು ಅತ್ತ ತೀರ್ಪು ನೀಡುತ್ತಲೇ ಇತ್ತ ಬಾಬಾ ಬೆಂಬಲಿಗರ ಗೂಂಡಾಗಿರಿ ಶುರುವಾಗಿದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಹರ್ಯಾಣದ ಎಲ್'ಐಸಿ ಕಚೇರಿಗೆ ಬೆಂಕಿ ಇಟ್ಟರೆ ಐಟಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈ ಗೂಂಡಾಗಿರಿಯಿಂದ ಹರ್ಯಾಣ, ಪಂಜಾಬ್, ದೆಹಲಿ ಅಕ್ಷರಶಃ ನಲುಗಿ ಹೋಗಿದೆ. ಇದನ್ನು ಕಂಡ ಸರ್ಕಾರ ಇದೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವಂತೆ ಡಿಸಿಪಿಯನ್ನು ವಜಾಗೊಳಿಸಿ ತನ್ನ ಕೈ ತೊಳೆದುಕೊಂಡಿದೆ.
ಬಾಬಾ ರಾಮ್ ರಹಿಮ್ ಸಿಂಗ್ ಬೆಂಬಲಿಗ ಗೂಂಡಾಗಿರಿಗೆ ಸುಮಾರು 32 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಹರ್ಯಾಣ ಸರ್ಕಾರ ಭದ್ರತಾ ವೈಫಲ್ಯಕ್ಕೆ ಪಂಚಕುಲಾ ಡಿಸಿಪಿಯನ್ನು ವಜಾಗೊಳಿಸಿದ್ದಾರೆ.
ಇತ್ತ ಬಾಬಾ ರಹೀಂಗೆ ಶಿಕ್ಷೆ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್'ಗೆ ಭಾರೀ ಭದ್ರತೆ ನೀಡಲು ಹರಿಯಾಣ ಸರ್ಕಾರಕ್ಕೆ, ಕೇಂದ್ರ ಸರ್ಕಾರ ಸೂಚಿಸಿದೆ. ಈಗಾಗಲೇ ಮುನ್ನೆಚ್ಚರಿಗೆ ಕ್ರಮವಾಗಿ ಸಿಬಿಐ ವಿಶೇಷ ಜಡ್ಜ್ ನಿವಾಸಕ್ಕೆ ಅರೆಸೇನಾ ಪಡೆ ಹಾಗೂ ಪೊಲೀಸರ ಭದ್ರತೆ ಕಲ್ಪಿಸಲಾಗಿದೆ.
