ಪಂಚಕುಲದಲ್ಲಿ ಕಳೆದ ಆಗಸ್ಟ್‌ನಲ್ಲಿ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಶಿಕ್ಷೆಗೆ ಗುರಿಯಾಗಿ, ಜೈಲು ಸೇರಿದ ಸಂದರ್ಭ ಹರ್ಯಾಣದಲ್ಲಿ ನಡೆದ ಹಿಂಸಾಚಾರದ ವೇಳೆ 126 ಕೋಟಿ ರು. ನಷ್ಟವಾಗಿದೆ.
ಚಂಡೀಗಢ: ಪಂಚಕುಲದಲ್ಲಿ ಕಳೆದ ಆಗಸ್ಟ್ನಲ್ಲಿ ಸಿಬಿಐ ವಿಶೇಷ ಕೋರ್ಟ್ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಶಿಕ್ಷೆಗೆ ಗುರಿಯಾಗಿ, ಜೈಲು ಸೇರಿದ ಸಂದರ್ಭ ಹರ್ಯಾಣದಲ್ಲಿ ನಡೆದ ಹಿಂಸಾಚಾರದ ವೇಳೆ 126 ಕೋಟಿ ರು. ನಷ್ಟವಾಗಿದೆ.
ಹರ್ಯಾಣದ ವಿವಿಧ ಜಿಲ್ಲೆಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಬೃಹತ್ ಮೊತ್ತದ ಸಾರ್ವಜನಿಕ ಆಸ್ತಿ ನಷ್ಟವಾಗಿತ್ತು. ಹಿಂಸಾಚಾರ ಸಂಭವಿಸಿದ ಜಿಲ್ಲೆಗಳ ಪೈಕಿ ಅಂಬಾಲದಲ್ಲಿ ಗರಿಷ್ಠ 42.84 ಕೋಟಿ ನಷ್ಟವಾಗಿದೆ.
ಫತೇಬಾದ್ನಲ್ಲಿ 14.87 ಕೋಟಿ ರು. ನಷ್ಟವಾಗಿತ್ತು. ನಷ್ಟದ ಅಂದಾಜು ಹಾಕಿ, ಆ ಮೊತ್ತ ವನ್ನು ಗುರ್ಮೀತ್ನ ಸಂಘಟನೆಯಿಂದ ವಸೂಲು ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು.
