ತುಮಕೂರು :  ತಮ್ಮ ಸ್ವ ಕ್ಷೇತ್ರ ತುಮಕೂರಿನಲ್ಲಿ ಬಿಜೆಪಿ ಗೆಲ್ಲಿಸಲು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸಾವಿರ ಪಟ್ಟು ಯತ್ನಿಸಿದ್ದಾರೆ. ಜಿ.ಎಸ್ ಬಸವರಾಜು ಗೆಲುವಿನಲ್ಲಿ  ಪರಮೇಶ್ವರ್ ಪಾತ್ರ ಹೆಚ್ಚಿದೆ ಎಂದು ಬಿಜೆಪಿ ನಾಯಕರೋರ್ವರು ಬಾಂಬ್ ಸಿಡಿಸಿದ್ದಾರೆ. 

ಜೆಡಿಎಸ್ ಸೋತು ಬಿಜೆಪಿ ಗೆಲ್ಲಲು ಕಾರಣ ಪರಮೇಶ್ವರ್, ತಾವು ಇದನ್ನು ಹತ್ತಿರದಿಂದಲೇ ನೊಡಿದ್ದೇನೆ. ಪರಮೇಶ್ವರ್ ಬಿಜೆಪಿ ನಾಯಕಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮೋದಿಜಿ ಅವರ ಕೈ ಬಲಪಡಿಸಲು ಸಹಕರಿಸಿ ಪರಮೇಶ್ವರ್ ಅವರಿಗೆ ಧನ್ಯವಾದ ಎಂದು ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ರಾಮಾಂಜನೇಯ ಹೇಳಿದ್ದಾರೆ. 

ಚಾಣಾಕ್ಷರಾದ ಜೆಡಿಎಸ್ ನಾಯಕ ದೇವೇಗೌಡರ ಚಾಣಾಕ್ಷತೆಯನ್ನು ಮೀರಿ ಪ್ಲಾನ್ ಮಾಡಿ ಪರಮೇಶ್ವರ್  ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ ಎಂದರು.  

ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಜೆಡಿಎಸ್ ಹಿರಿಯ ನಾಯಕ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಿರುದ್ಧ ಪರಾಭವಗೊಂಡಿದ್ದರು.