ಹೈದರಾಬಾದ್’ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಶ್ರಿನಿವಾಸಾಚಾರಿ ಎಂಬವರು ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಅವರ ಪತ್ನಿ ಅವರನ್ನು ಚಿಕಿತ್ಸೆಗಾಗಿ ಗುಂಟಕಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ನಡೆಯಲು ಸಾಧ್ಯವಿಲ್ಲದ ಅವರನ್ನು ಮೊದಲನೇ ಮಹಡಿಗೆ ಕೊಂಡೊಯ್ಯಬೇಕಿತ್ತು.

ಹೈದರಾಬಾದ್ (ನ.17): ರೋಗಿಯನ್ನು ಒಂದನೇ ಮಹಡಿಗೆ ಒಯ್ಯಲು ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್’ಅನ್ನು ಕೊಡಲು ನಿರಾಕರಿಸಿದ ಕಾರಣ ಮಹಿಳೆಯೊಬ್ಬಳು ತನ್ನ ಗಂಡನನ್ನು ಎಳೆದುಕೊಂಡೇ ಹೋಗಾಬೇಕಾದ ದಾರುಣ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಂಟಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಹೈದರಾಬಾದ್’ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಶ್ರಿನಿವಾಸಾಚಾರಿ ಎಂಬವರು ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಅವರ ಪತ್ನಿ ಅವರನ್ನು ಚಿಕಿತ್ಸೆಗಾಗಿ ಗುಂಟಕಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ನಡೆಯಲು ಸಾಧ್ಯವಿಲ್ಲದ ಅವರನ್ನು ಮೊದಲನೇ ಮಹಡಿಗೆ ಕೊಂಡೊಯ್ಯಬೇಕಿತ್ತು. ಅಲ್ಲಿನ ಸಿಬ್ಬಂದಿಗೆ ವ್ಹೀಲ್’ಚೇರ್ ಅಥವಾ ಸ್ಟ್ರೆಚರ್’ಅನ್ನು ಒದಗಿಸಲು ಕೇಳಿಕೊಂಡಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ. ಬೇರೆ ವಿಧಿಯಿಲ್ಲದೇ, ಆಕೆ ತನ್ನ ಪತಿಯನ್ನು ರ್ಯಾಂಪ್’ನಲ್ಲೇ ಎಳೆದುಕೊಂಡು ಹೋಗಬೇಕಾಯ್ತು.

ಅಷ್ಟರಲ್ಲೇ ಅಲ್ಲಿದ್ದವರು ಅದನ್ನು ಪ್ರಶ್ನಿಸಿದಾಗ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತು ಸ್ಟ್ರೆಚರ್ ಒದಗಿಸಿದ್ದಾರೆ. ಆಸ್ಪತ್ರೆ ಅಧಿಕಾರಿಗಳು ಆ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.