ಸೋಂಕುಪೀಡಿತರ ಸಂಖ್ಯೆ ಸಾವಿರಕ್ಕೆ ತಲುಪಿದೆ.

ನವದೆಹಲಿ (ಸೆ.17): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಡೆಂಘಿ ಹಾಗೂ ಚಿಕುನ್ ಗುನ್ಯಾ ಉಲ್ಬಣಗೊಂಡಿದೆ. ಈವರೆಗೆ 11 ಮಂದಿ ಮೃತಪಟ್ಟಿದ್ದು, ಸೋಂಕುಪೀಡಿತರ ಸಂಖ್ಯೆ ಸಾವಿರಕ್ಕೆ ತಲುಪಿದೆ. ಚಿಕುನ್ ಗುನ್ಯಾ ರೋಗ ಉಲ್ಬಣಗೊಂಡಿದ್ದು, ಪ್ರತಿ ದಿನ ಸಾವು ವರದಿಯಾಗುತ್ತಿದೆ. ರೋಗ ಕೂಡ ನಿತ್ಯ ಉಲ್ಬಣಗೊಂಡು, ಜನರು ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ,ಜನರ ಸಹಾಯಕ್ಕೆ ಬರಬೇಕಾಗಿರೋ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಟಲು ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ತ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಫಿನ್ ಲ್ಯಾಂಡ್​ಗೆ ಅಧ್ಯಾಯ ಪ್ರವಾಸ ಅಂತ ಹೋಗಿ ಸಕತ್​ ಎಂಜಾಯ್​​ ಮಾಡುವ ಪೋಟೋಗಳು ಬಯಲಾಗಿವೆ.

ದೆಹಲಿಯಲ್ಲಿ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ ಹೆಚ್ಚಾಗುತ್ತಿರುವ ವಿಚಾರ ಗೊತ್ತಿದ್ರೂ ಕೂಡ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇಂಥಾ ಸಮಯದಲ್ಲಿಯೇ ದೆಹಲಿಯ ಲೆಪ್ಟಿನೆಂಟ್​ ಗರ್ವನರ್​ ನಜೀಬ್​ ಜಂಗ್​ ಕೂಡ ಅಮೆರಿಕ ಪ್ರವಾಸದಲ್ಲಿ ಇದ್ದಾರೆ. ಇದು ದೆಹಲಿ ಜನರ ಆಕ್ರೊಶಕ್ಕೆ ಕಾರಣವಾಗಿದೆ