ಕಲ್ಕತ್ತ (ನ.12): 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಪ.ಬಂ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಇದೊಂದು ಅಪಾಯಕಾರಿ ನಿರ್ಧಾರವಾಗಿದ್ದು ಇದನ್ನು ಸರ್ಜಿಕಲ್ ಅನಾರ್ಕಿ ಎಂದು ವ್ಯಂಗ್ಯವಾಡಿದ್ದಾರೆ.

ಕೇವಲ ಶೇ.1 ರಷ್ಟು ಮಂದಿ ಕಪ್ಪುಹಣವನ್ನು ಹೊಂದಿದ್ದಾರೆ. ಅವರಿಗೋಸ್ಕರ ಯಾಕೆ ಉಳಿದ 99 ರಷ್ಟು ಮಂದಿ ತೊಂದರೆ ಅನುಭವಿಸಬೇಕು? ಈ ಒಂದು ತಪ್ಪು ನಿರ್ಧಾರದಿಂದ ಕೆಲವರಿಗೆ ಲಾಭವಾಗಲಿದೆ. ದೊಡ್ಡ ದೊಡ್ಡ ಆರ್ಥಿಕ ತಜ್ಞರು ಮೋದಿಯವರ ಈ ನಿರ್ಧಾರ ಕಪ್ಪುಹಣದ ಮೇಲೆ ಪ್ರಭಾವ ಬೀರುವುದಿಲ್ಲ ಎನ್ನುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.