ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8, 2016 ರಲ್ಲಿ ಹಳೆಯ ಸಾವಿರ ಹಾಗೂ ಐನೂರು ನೋಟುಗಳನ್ನು ರದ್ದುಗೊಳಿಸಿದ್ದರು. ಸ್ವತಂತ್ರ ಬಂದ ನಂತರ ಹೆಚ್ಚು ಮೌಲ್ಯವುಳ್ಳ ನೋಟುಗಳನ್ನು ಅಪಮೌಲ್ಯಗೊಳಿಸಿದ್ದು ಇದೇ ಮೊದಲಾಗಿತ್ತು.   

ನವದೆಹಲಿ(ಆ.30): ಅಮಾನ್ಯಿಕರಣಗೊಂಡ ನೋಟು'ಗಳಲ್ಲಿ ಶೇ. 99 ರಷ್ಟು ವಾಪಸ್ ಬಂದಿದೆ ಎಂದು ಆರ್'ಬಿಐ ವರದಿ ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8, 2016 ರಲ್ಲಿ ಹಳೆಯ ಸಾವಿರ ಹಾಗೂ ಐನೂರು ನೋಟುಗಳನ್ನು ರದ್ದುಗೊಳಿಸಿದ್ದರು. ಸ್ವತಂತ್ರ ಬಂದ ನಂತರ ಹೆಚ್ಚು ಮೌಲ್ಯವುಳ್ಳ ನೋಟುಗಳನ್ನು ಅಪಮೌಲ್ಯಗೊಳಿಸಿದ್ದು ಇದೇ ಮೊದಲಾಗಿತ್ತು. ಕಳೆದ 10 ತಿಂಗಳಲ್ಲಿ 15.44 ಲಕ್ಷ ಕೋಟಿ ಹಳೆಯ ನೋಟುಗಳು ವಾಪಸ್ ಆಗುವುದರೊಂದಿಗೆ ಶೇ. 99 ರಷ್ಟು ಬ್ಯಾಂಕ್'ಗಳಿಗೆ ಸಂದಾಯವಾಗಿದೆ ಎಂದು ಆರ್'ಬಿಐ ತಿಳಿಸಿದೆ.

1 ಸಾವಿರ ರೂಗಳ 256,324 ಹಾಗೂ 500 ರೂ.ಗಳ 317,567 ಸಂದಾಯವಾಗಿದೆ. 6,700 ಮಿಲಿಯನ್ ಹಳೆಯ ನೋಟುಗಳು ಪತ್ತೆಯಾಗಿರದೆ ಇದರಲ್ಲಿ 1000 ರೂ.ಗಳ 8,900 ಕೋಟಿ ಹಳೆಯ ನೋಟುಗಳು ಸೇರಿವೆ' ಎಂದು ಆರ್'ಬಿಐ ಪ್ರಕಟಣೆ ತಿಳಿಸಿದೆ.