ನೋಟು ನಿಷೇಧ ಘೋಷಣೆಯಾದಾಗಿನಿಂದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಇಂದು ಸಹ ಸರ್ಕಾರವನ್ನು ಟೀಕಿಸಿದ್ದಾರೆ. ಕಳೆದ ಎರಡೂವರೆ ವರ್ಷದಲ್ಲಿ ಶೇ. 1 ರಷ್ಟು ಶ್ರೀಮಂತರು ದೇಶದ ಶೇ. 60 ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

 ಗೋವಾ (ಡಿ.16): ನೋಟು ನಿಷೇಧ ಘೋಷಣೆಯಾದಾಗಿನಿಂದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಇಂದು ಸಹ ಸರ್ಕಾರವನ್ನು ಟೀಕಿಸಿದ್ದಾರೆ. ಕಳೆದ ಎರಡೂವರೆ ವರ್ಷದಲ್ಲಿ ಶೇ. 1 ರಷ್ಟು ಶ್ರೀಮಂತರು ದೇಶದ ಶೇ. 60 ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ, ಮೋದಿ ಸರ್ಕಾರ ಘೋಷಿಸಿದ ನೋಟು ನಿಷೇಧವು ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರುದ್ಧ ನಡೆಸುತ್ತಿರುವ ಸಮರವಲ್ಲ ಬದಲಿಗೆ ಇದೊಂದು ನಾಟಕ ಎಂದಿದ್ದಾರೆ.

ಶೇ. 1 ರಷ್ಟಿರುವ ಶ್ರೀಮಂತರಿಗೆ ಬೆಂಬಲ ನೀಡಲು ಮೋದಿ ನೋಟು ನಿಷೇಧ ಮಾಡಿದ್ದಾರೆ ಎಂದಿದ್ದಾರೆ.