"ಇದು ಬಹಳ ಮುಖ್ಯವಾದ ಹಾಗೂ ಅಗತ್ಯವಾದ ನಿರ್ಧಾರವಾಗಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇದು ಬೇಕಾಗಿತ್ತು" ಎಂದು ಅಮೆರಿಕ ಸರಕಾರದ ಉಪ ವಕ್ತಾರ ಮಾರ್ಕ್ ಟೋನರ್ ವಿಶ್ಲೇಷಿಸಿದ್ದಾರೆ.

ವಾಷಿಂಗ್ಟನ್(ಡಿ. 01): ನೋಟ್ ಬ್ಯಾನ್ ಮಾಡಿದ ಮೋದಿ ಸರಕಾರದ ನಿರ್ಧಾರವನ್ನು ಇತ್ತ ವಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ, ಅತ್ತ ಅಮೆರಿಕವು ಶ್ಲಾಘನೆ ವ್ಯಕ್ತಪಡಿಸಿದೆ. 500 ಮತ್ತು 1000 ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಕ್ರಮವು ಭ್ರಷ್ಟಾಚಾರವನ್ನು ನಿಗ್ರಹಿಸಲು ಅಗತ್ಯವಾಗಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

"ಇದು ಬಹಳ ಮುಖ್ಯವಾದ ಹಾಗೂ ಅಗತ್ಯವಾದ ನಿರ್ಧಾರವಾಗಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇದು ಬೇಕಾಗಿತ್ತು" ಎಂದು ಅಮೆರಿಕ ಸರಕಾರದ ಉಪ ವಕ್ತಾರ ಮಾರ್ಕ್ ಟೋನರ್ ವಿಶ್ಲೇಷಿಸಿದ್ದಾರೆ.

"...ನೋಟ್ ಬ್ಯಾನ್'ನಿಂದ ತೊಂದರೆ ಆಗಬಹುದು. ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಆದರೆ, ಇದು ಭ್ರಷ್ಟಾಚಾರ ನಿಗ್ರಹಕ್ಕೆ ಅಗತ್ಯ ಕ್ರಮ ಎಂಬುದು ಭಾರತೀಯರಿಗೆ ತಿಳಿದಿರಲಿ" ಎಂದು ಟೋನರ್ ಹೇಳಿದ್ದಾರೆ.