ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದಾ ನಾಳೆ ನಡೆಯಲಿರುವ 71 ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ನವದೆಹಲಿ (ಆ.14): ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದಾ ನಾಳೆ ನಡೆಯಲಿರುವ 71 ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2022 ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿ 75 ವರ್ಷ ಪೂರ್ಣಗೊಳ್ಳುತ್ತದೆ. ಅಷ್ಟೊತ್ತಿಗೆ ನಾವು ಕೆಲವು ಮೈಲುಗಲ್ಲುಗಳನ್ನು ಸಾಧಿಸಬೇಕು. ಬಡತನ ನಿರ್ಮೂಲನೆ ಮಾಡಬೇಕು. ಜಿಎಸ್’ಟಿಯನ್ನು ತುಂಬಾ ಸಂತೋಷದಿಂದ ಒಪ್ಪಿಕೊಂಡ ದೇಶದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ದೇಶಕ್ಕೆ ಸ್ವಾತಂತ್ರ ನೀಡಿದವರಿಂದ ನಾವು ಸ್ಪೂರ್ತಿ ತೆಗೆದುಕೊಳ್ಳಬೇಕು. ಶಾಂತಿ ಮತ್ತು ಒಗ್ಗಟ್ಟಿನಲ್ಲಿ ನಾವು ನಂಬಿಕೆಯಿಡಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. 

(ಸಾಂದರ್ಭಿಕ ಚಿತ್ರ)