ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯ ಕ್ರಮ ನಗದುರಹಿತ ವ್ಯವಹಾರವನ್ನು ಅಭಿವೃದ್ಧಪಡಿಸಲಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಆನ್ ಲೈನ್ ವ್ಯವಹಾರವನ್ನು ಪ್ರಚಾರಪಡಿಸಲು ಒಳ್ಳೆಯ ಅವಕಾಶ ಎಂದು ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿ ಹೇಳಿದ್ದಾರೆ.

ನವದೆಹಲಿ (ನ.26): ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯ ಕ್ರಮ ನಗದುರಹಿತ ವ್ಯವಹಾರವನ್ನು ಅಭಿವೃದ್ಧಪಡಿಸಲಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಆನ್ ಲೈನ್ ವ್ಯವಹಾರವನ್ನು ಪ್ರಚಾರಪಡಿಸಲು ಒಳ್ಳೆಯ ಅವಕಾಶ ಎಂದು ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರಿಯಾದ ಸಮಯದಲ್ಲಿ ಸೂಕ್ತವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಇದರ ಅಗತ್ಯ ಕೂಡಾ ಇತ್ತು. ಸಾಮಾನ್ಯ ವ್ಯಕ್ತಿಯೂ ಇ-ಟ್ರಾನ್ಸಾಕ್ಷನ್ ಮೇಲೆ ಅವಲಂಬಿತನಾಗಬೇಕು. ನೋಟು ನಿಷೇಧವು ತಾತ್ಕಾಲಿಕವಾಗಿ ತೊಂದರೆ ಅನಿಸಿದರೂ ದೇಶದ ಭವಿಷ್ಯದಲ್ಲಿ ಯೋಚಿಸಿದಾಗ ಒಳ್ಳೆಯ ನಿರ್ಧಾರವಾಗಿದೆ ಎಂದು ಮೋದಿಯವರ ಕ್ರಮವನ್ನ ಸಮರ್ಥಿಸಿಕೊಂಡರು.