ಕೇಂದ್ರ ಸರ್ಕಾರವು ರೂ.500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿರುವುದು ಮೋದಿಯವರು ನಡೆಸಿದ ಸರ್ಜಿಕಲ್ ದಾಳಿಯಲ್ಲ ಬದಲಿಗೆ ಜನಸಾಮಾನ್ಯರ ಮೇಲೆ ನಡೆಸಿರುವ ಯದ್ವಾತದ್ವಾ ಪ್ರಹಾರ (ಕಾರ್ಪೆಟ್ ಬಾಂಬಿಂಗ್) ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.  

ನವದೆಹಲಿ (ನ.15): ಕೇಂದ್ರ ಸರ್ಕಾರವು ರೂ.500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿರುವುದು ಮೋದಿಯವರು ನಡೆಸಿದ ಸರ್ಜಿಕಲ್ ದಾಳಿಯಲ್ಲ ಬದಲಿಗೆ ಜನಸಾಮಾನ್ಯರ ಮೇಲೆ ನಡೆಸಿರುವ ಯದ್ವಾತದ್ವಾ ಪ್ರಹಾರ (ಕಾರ್ಪೆಟ್ ಬಾಂಬಿಂಗ್) ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನೋಟು ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ನ್ನು ವಿಚಾರಣೆ ನಡೆಸಿರುವ ಸುಪ್ರೀಂ ವಿಚಾರಣೆಯನ್ನು ನ.25 ಕ್ಕೆ ಮುಂದೂಡಿದೆ.

500 ಹಾಗೂ 1000 ರೂ. ನೋಟುಗಳ ಬ್ಯಾನ್ ನಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

ನೋಟುಗಳ ರದ್ದಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಸಮರ್ಥಿಸಿಕೊಂಡು ಮತ್ತು ಜನರಿಗೆ ಅನಾನುಕೂಲವಾಗದಂತೆ ತೆಗೆದುಕೊಂಡ ಕ್ರಮದ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.ಸರ್ಕಾರ

ಹೊರಡಿಸಿರುವ ಅಧಿಸೂಚನೆಯ ಕಾನೂನಾತ್ಮಕ ಸಿಂಧುತ್ವವನ್ನು ಪರಿಶೀಲಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.